Kannada NewsKarnataka NewsNationalPolitics
*ನಿಮಗೆ ನಾಚಿಕೆ ಆಗುವುದಿಲ್ವಾ? ಬಾನು ಮುಷ್ತಾಕ್ ವಿರುದ್ಧ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಅರಿಶಿನ ಕುಂಕುಮ ಹಾಕಿ ನೀವು ಕನ್ನಡ ಮಾತೆಯನ್ನು ಕನ್ನಡ ಭುವನೇಶ್ವರಿ ಆಗಿ ಮಾಡಿದ್ದೀರಿ. ಹಾಗಾದರೆ ಮುಸ್ಲಿಮರು ಹೇಗೆ ಕನ್ನಡ ಕಲಿಯಬೇಕು ಎಂದಿದ್ದರು. ಯಾಕೆ ನೀವು ಕನ್ನಡದ ನಾಡಿನ ಅನ್ನ ತಿಂದಿಲ್ವಾ ಕಾವೇರಿ ನದಿ ನೀರು ಕುಡಿದಿಲ್ವಾ? ಇಷ್ಟೆಲ್ಲಾ ಮಾತಾಡಿ ದಸರಾ ಉದ್ಘಾಟನೆಗೆ ಬರ್ತೀನಿ ಅನ್ನೋದಕ್ಕೆ ನಾಚಿಕೆ ಆಗುವುದಿಲ್ವಾ?’ ಎಂದು ಬಾನು ಮುಷ್ತಾಕ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.
ಧರ್ಮಸ್ಥಳದಲ್ಲಿ ಮಾತನಾಡಿರುವ ಅವರು, ಬಾನು ಮುಷ್ತಾಕ್ ರನ್ನ ಕರೆತಂದು ದೀಪಾ ಬಸ್ತಿಯವರನ್ನು ಮರೆತೇ ಬಿಟ್ಟಿದ್ದಾರೆ. ಯಾಕೆಂದರೆ ಅವರು ಹಿಂದೂ ಎಂದು ಕಿಡಿಕಾರಿದರು.
ಮನಸೋ ಇಚ್ಛೆ ಮಾತಾಡಿರೋ ಬಾನು ಮುಷ್ತಾಕ್, ಮೊದಲು ಕ್ಷಮೆ ಕೇಳಲಿ. ನಾನು ಭುವನೇಶ್ವರಿಯನ್ನೂ ಒಪ್ಪುತ್ತೇನೆ, ಚಾಮುಂಡಿ ತಾಯಿಯನ್ನೂ ಒಪ್ಪುತ್ತೇನೆ ಅಂತ ಶಿರಭಾಗಿ ಕ್ಷಮೆ ಕೇಳಿದರೆ, ನಾವೇ ಬಂದು ತಮ್ಮನ್ನು ಸ್ವಾಗತ ಕೋರುತ್ತೇವೆ ಎಂದರು.