ರೋಚಕವಾಗಿ ನಡೆದ ಅಂತಿಮ ಪಂದ್ಯ : ಮೆಸ್ಸಿಗೆ ಸಂತಸದ ವಿದಾಯ
ಪ್ರಗತಿ ವಾಹಿನಿ ಸುದ್ದಿ, ಕತಾರ್ : ಕತಾರನ ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ 2022 ರ ಫೈನಲ್‌ನಲ್ಲಿ ಅರ್ಜೆಂಟಿನಾ ತಂಡವು ಪ್ರಾನ್ಸ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಿತು. 36 ವರ್ಷದ ಬಳಿಕ ಅಂರ್ಜೆಂಟಿನಾ ಮತ್ತೆ ವಿಶ್ವ ಕಪ್ ಎತ್ತಿ ಹಿಡಿಯಿತು.
ಪಂದ್ಯದ ನಿಗದಿತ ಅವಧಿ ಮತ್ತು ಹೆಚ್ಚುವರಿ ಅವಧಿಯಲ್ಲಿ ಫಲಿತಾಂಶ ಬರಲಿಲ್ಲ. ಹಾಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೇಂಟಿನಾ 4-2 ಗೋಲುಗಳೊಂದಿಗೆ ಫ್ರಾನ್ಸ್ ತಂಡವನ್ನು ಸೋಲಿಸಿ ವಿಶ್ವಕಪ್ ತನ್ನಾದಾಗಿಸಿಕೊಂಡಿತು.
ಫೈನಲ್ ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ಮೊದಲಾರ್ಧದಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದವು. ಆದರೆ, ಅರ್ಜೆಂಟಿನಾ ತಂಡದ ಸಂಘಟನಾತ್ಮಕ ಆಟದ ಎದುರು ಫ್ರಾನ್ಸ್ ನ ಆಟ ನಡೆಯಲಿಲ್ಲ.
ಅರ್ಜೆಂಟೀನಾ ಮೊದಲಾರ್ಧದಲ್ಲಿ 2 ಗೋಲುಗಳಿಸಿ ಮುನ್ನಡೆ ಸಾಧಿತು. 23ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಗೋಲು ಗಳಿಸಿದರು.
ನಂತರ 36ನೇ ನಿಮಿಷದಲ್ಲಿ ಏಂಜೆಲ್ ಡಿ ಮರಿಯಾ ಕೂಡ ಗೋಲು ಬಾರಿಸಿ ಸ್ಕೋರ್ ಅನ್ನು 2-0ಗೆ ಹೆಚ್ಚಿಸಿದರು.
ಆದರೆ, ಪಂದ್ಯದ 80 ಮತ್ತು 81ನೇ ನಿಮಿಷದಲ್ಲಿ ದಾಖಲಾದ ಎರಡು ಗೋಲು ಅರ್ಜೆಂಟೀನಾಕ್ಕೆ ಆಘಾತ ನೀಡಿತು. 80ನೇ ನಿಮಿಷದಲ್ಲಿ ಪೆನಾಲ್ಟಿ ಮತ್ತು 82ನೇ ನಿಮಿಷದಲ್ಲಿ ಫಿಲ್ಡ್ ಗೋಲು ಗಳಿಸಿದ ಎಂಬಪ್ಪೆ ಸ್ಕೋರ ಗೆರೆಯನ್ನು 2-2ರಲ್ಲಿ ಸಮಬಲಗೊಳಿಸಿದರು.
97 ಸೆಕೆಂಡ್‌ಗಳಲ್ಲಿ ಎಂಬಪ್ಪೆ ಪಂದ್ಯದ ಹಣೆಬರಹವನ್ನೇ ಬದಲಿಸಿದರು.
ಮೊದಲಾರ್ಧ ಮತ್ತು ದ್ವಿತಿಯಾರ್ಧದ ಕೊನೆಯವರೆಗೂ ಅರ್ಜೆಂಟೀನಾ ಪಂದ್ಯ ಮೇಲೆ ಹಿಡಿತ ಸಾಧಿಸಿತ್ತು. ಆದರೆ, 80 ನಿಮಿಷದಲ್ಲಿ ಹಿಡಿತ ಕೊನೆಗೊಂಡಿತು. ಆಟದ ಅವಧಿ ಮುಗಿದಾಗ ಎರಡೂ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು.
ಬಳಿಕ ಫೆನಾಲ್ಟಿ ಶೂಟ್ ಔಟ್ ನಲ್ಲಿ ಅರ್ಜೆಂಟಿನಾ ಮತ್ತೆ 2 ಗೋಲ್ ಗಳನ್ನು ಗಳಿಸಿ ಫುಟ್ ಬಾಲ್ ವಿಶ್ವಕಪ್ ಮುಡಿಗೇರಿಸಿಕೊಂಡಿತು.
https://twitter.com/BSBommai/status/1604543533636935680?s=20&t=XvlItC0r8kZ4piLfqSsl4g
https://pragati.taskdun.com/belagaviwinter-sessioncm-basavaraj-bommai-2/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ