Cancer Hospital 2
Beereshwara 36
LaxmiTai 5

*ಅರಿಹಂತ ಗ್ರುಪ್ ಚೇರಮನ್, ಸಹಕಾರ ರತ್ನ ರಾವಸಾಹೇಬ ಪಾಟೀಲ ನಿಧನ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹಿರಿಯ ಸಹಕಾರಿ ಧುರಿಣರು, ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಹಕಾರಿ ಕ್ಷೇತ್ರದ ಹಿರಿಯ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಾವಸಾಹೇಬ ಪಾಟೀಲ (ದಾದಾ) (ವಯಸ್ಸು ೮೩) ಮಂಗಳವಾರ ಬೆಳಿಗ್ಗೆ ೧೦.೪೦ ಕ್ಕೆ ನಿಧನರಾದರು.

ಅವರು, ಪತ್ನಿ ಮೀನಾಕ್ಷಿ, ಪುತ್ರರಾದ ಅಭಿನಂದನ್ ಪಾಟೀಲ, ಉತ್ತಮ ಪಾಟೀಲ ಮತ್ತು ಪುತ್ರಿ ದೀಪಾಲಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮಗಳವಾರ ಮಧ್ಯಾಹ್ನ ೨.೩೦ರ ಸುಮಾರಿಗೆ ಅವರ ಪಾರ್ಥಿವದ ಅಂತ್ಯಯಾತ್ರೆ ಬೋರಗಾಂವ ಪಟ್ಟಣದಲ್ಲಿಯ ಪ್ರಮುಖ ಬಿದಿಗಳಲ್ಲಿ ನಡೆಯಲಿದೆ. ೪ ಗಂಟೆ ವರೆಗೆ ಇಲ್ಲಿನ ಅರಿಹಂತ್ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಾಡಲಾಗುವುದು.
ರಾವ್ ಸಾಹೇಬ ಪಾಟೀಲ ಅವರು ಏಪ್ರಿಲ್ ೧೧, ೧೯೪೪ ರಂದು ಅಣ್ಣಾಸಾಹೇಬ ಮತ್ತು ಸುಮತಿ ದಂಪತಿಗೆ ಜನಿಸಿದರು, ರೈತ ಕುಟುಂಬದಿಂದ ಬಂದ ರಾವಸಾಹೇಬ ಪಾಟೀಲ್ ಅವರು ತಮ್ಮ ಕುಟುಂಬದಿಂದ ಸಾಮಾಜಿಕ ಕಾರ್ಯಗಳನ್ನು ತಮ್ಮ ತಂದೆ ಮತ್ತು ತಾಯಿಯಿಂದ ಕಲೆತರು. ಬೋರಗಾಂವ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೋಳಿಸಲು ಅವಿರತ ಪ್ರಯತ್ನಗಳನ್ನು ಮಾಡಿದರು ಮತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಹಕಾರ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ಕಾರ್ಯಗಳನ್ನು ಸಂಯೋಜಿಸಿದರು. ಅವರು ತಮ್ಮ ಜೀವನದಲ್ಲಿ ಅನೇಕ ಹೋರಾಟಗಳ ಮೂಲಕ ಯಶಸ್ವಿಯಾದರು. ದಾದಾ ಜೀವನದಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ಅರ್ಪಿಸಿಕೊಂಡರು.

ಅವರು ಬೋರಗಾಂವ್‌ನಲ್ಲಿ ಅರಿಹಂತ್ ಉದ್ಯೋಗ್ ಗ್ರೂಪ್ ಅನ್ನು ಸ್ಥಾಪಿಸಿ ಅದರ ಆರ್ಥಿಕ ಪ್ರಗತಿಯೊಂದಿಗೆ ರೈತರನ್ನು ಸ್ವಾಭಿಮಾನದಿಂದ ತಲೆ ಎತ್ತುವಂತೆ ಮಾಡಿದರು. ಕೈಗಾರಿಕೋದ್ಯಮದ ಮೂಲಕ ವಿವಿಧ ವೇತನ ಯೋಜನೆಗಳು, ಆವಾಸ ಯೋಜನೆಗಳು, ವಿಕಲಚೇತನರಿಗೆ ಸೈಕಲ್ ವಿತರಣೆ ಮತ್ತು ನಿರ್ಗತಿಕರಿಗೆ ಶೈಕ್ಷಣಿಕ ಸಾಮಗ್ರಿಗಳ ಮೂಲಕ ಸಮಾಜಸೇವೆಯನ್ನು ಅವಿರತವಾಗಿ ಮುಂದುವರೆಸಿದ ಅವರು ತಮ್ಮ ಜೀವನದುದ್ದಕ್ಕೂ ಯಾವುದೇ ಹುದ್ದೆಯನ್ನು ನಿರೀಕ್ಷಿಸದೆ ಜಾತ್ಯತೀತ ಮನೋಭಾವದಿಂದ ಕೆಲಸ ಮಾಡಿದರು.

Emergency Service

ರಾಜಕೀಯ ಮಾಡುತ್ತಲೇ ಸಾಮಾನ್ಯ ಕಾರ್ಯಕರ್ತನನ್ನು ರಾಜಕೀಯದಿಂದ ಮೇಲೆತ್ತುವ ಕೆಲಸವನ್ನು ಅವರು ಮಾಡಿದರು. ಕಾರ್ಯಕರ್ತರನ್ನು ಬೇಂಬಲಿಸಿ ನಿಮ್ಮ ಹಿಂದೆ ನಾನು ಇದ್ದೇನೆ, ಸವಾಲಗಳನ್ನು ಎದುರಿಸಿ ಯಶ್ವಿಸಿಯಾಗಿರಿ ಎಂದು ಸದಾ ಹೇಳುತ್ತಿದ್ದ ರಾವಸಾಹೇಬ ಪಾಟೀಲ ಬೋರಗಾಂವ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು.
ಬೋರಗಾಂವ ನಗರದ ಜತೆಗೆ ನಿಪ್ಪಾಣಿ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಸದಾ ಪ್ರಯತ್ನಿಸಿದ್ದ ಅವರ ಈ ಗುಣದ ವೈಶಿಷ್ಠೈದಿಂದಾಗಿ ಕ್ಷೇತ್ರದ ಹಳ್ಳಿಗಳಲ್ಲಿ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲೇ ತಮ್ಮ ಕಾರ್ಯಕರ್ತರ ಹುಮ್ಮಸ್ಸು ಮೂಡಿಸಿದ್ದರು.
ರಾವಸಾಹೇಬ ಪಾಟೀಲ ಅವರ ಸ್ಮರಣ ಶಕ್ತಿಯು ತುಂಬಾ ಚೇನ್ನಾಗಿತ್ತು. ೪೦ ವರ್ಷಗಳ ನಿಪ್ಪಾಣಿ ತಾಲೂಕ ರಾಜಕೀಯದ ಘಟನಾವಳಿಗಳನ್ನು ಅವರು ಯಾವಾಗಲು ಹೇಳುತ್ತಿದ್ದ್ರು, ರಾಜಕೀಯದಲ್ಲಿ ಯಾರು ಏನು ಹೇಳಿದರು ಎಂಬ ನಿಖರ ಜ್ಞಾನ ಅವರಿಗಿತ್ತು.
೮೩ ರ ಹರೆಯದ ರಾವಸಾಹೇಬ ಪಾಟೀಲರ ಉತ್ಸಾಹ ಅಪಾರ. ತನ್ನ ಮಕ್ಕಳಿಗಿಂತ ಚಿಕ್ಕವರಾದ ಯುವಕರೊಡನೆ ಸೌಹಾರ್ದಯುತವಾಗಿ ಮಾತನಾಡುತ್ತಿದ್ದರು.
ಪಾಟೀಲರಿಂದಾಗಿ ನೀರಿನ ಯೋಜನೆ ಚಾಲನೆ
ಬೋರಗಾಂವ ನಾಗರಿಕರು ನಿತ್ಯ ಎದುರಿಸುತ್ತಿರುವ ಸಮಸ್ಯೆ ನೀರಿನ ಸಮಸ್ಯೆಯಾಗಿತ್ತು. ಈ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಅವರ ಮೂಲಕ ವಿಶ್ವಬ್ಯಾಂಕ್ ನಿಂದ ಈ ನೀರಿನ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಇಂದು ಅವರಿಂದಾಗಿ ಇಡೀ ನಗರವಾಸಿಗಳು ಕುಡಿಯುವ ನೀರು ಪಡೆಯುತ್ತಿದ್ದಾರೆ. ನಗರದಲ್ಲಿ ಇಂತಹ ಅನೇಕ ನೀರಿನ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ರೈತರು ಮತ್ತು ನಾಗರಿಕರು ಇಂದು ಸಂತೃಪ್ತರಾಗಿದ್ದಾರೆ.
ದಕ್ಷಿಣ ಭಾರತ ಜೈನ ಸಭಾದ ಪುನರುಜ್ಜೀವನ
ಜೈನ ಸಮುದಾಯದ ಪ್ರತಿಷ್ಠೆಯೆಂದು ಪರಿಗಣಿಸಲಾದ ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯ ಕ್ಕೆ ಒತ್ತು ನೀಡಿದ ಅವರು ಸಮಾಜದ ಪ್ರತಿ ಮಗು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ಯೋಜನೆಯನ್ನು ಕೈಗೊಂಡರು. ಇಂದು ಈ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಲಭ್ಯವಿದ್ದು, ಈ ಮೂಲಕ ಅನೇಕ ಜನರು ಶಿಕ್ಷಣ ಪಡೆದುಕೊಂಡಿದ್ದಾರೆ ಮತ್ತು ಬಡವರು ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ರಾವ್ ಸಾಹೇಬ ಪಾಟೀಲ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂತಾಪ ಸೂಚಿಸಿದ್ದಾರೆ. ರಾವ್ ಸಾಹೇಬ ಪಾಟೀಲ ಅವರು ಸಾಮಾಜಿಕ ಹಾಗೂ ಸಹಕಾರ ರಂಘದ ಸೇವೆಯನ್ನು ಅವರು ಸ್ಮರಿಸಿದ್ದಾರೆ.

Bottom Add3
Bottom Ad 2