Latest

ಅರ್ಜುನ್ ಸರ್ಜಾಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ಅರ್ಜುನ್ ಸರ್ಜಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಕುರಿತು ಸ್ವತ: ನಟ ಮಾಹಿತಿ ನೀಡಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂದಿರುವ ನಟ ಅರ್ಜುನ್ ಸರ್ಜಾ, ತಮಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ನಾನು ಐಸೋಲೇಟ್ ಆಗಿದ್ದೇನೆ. ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Home add -Advt

ಇದೇ ವೇಳೆ ಅಭಿಮಾನಿಗಳಿಗೆ ಜಾಗೃತಿ ಸಂದೇಶ ನೀಡಿರುವ ಅವರು, ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸುರಕ್ಷಿತರಾಗಿರಿ, ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ರಾಮ ಭಕ್ತ ಹನುಮಾನ್ ಕಿ ಜೈ ಎಂದು ತಿಳಿಸಿದ್ದಾರೆ.

ಚನ್ನರಾಜ ಹಟ್ಟಿಹೊಳಿಗೆ 3715 ಮತ!

Related Articles

Back to top button