
ಪ್ರಗತಿವಾಹಿನಿ ಸುದ್ದಿ: ರಷ್ಯಾದ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಅವರು ಸೋಮವಾರ ಮಾಸ್ಕೋದಲ್ಲಿ ತಮ್ಮ ಕಾರಿನ ಕೆಳಗೆ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ದುರ್ಮರಣಕ್ಕಿಡಾಗಿದ್ದಾರೆ ಎಂದು ತನಿಖಾಧಿಕಾರಿಗಳ ತಿಳಿಸಿದ್ದಾರೆ.
ಸ್ಫೋಟದ ಬೆನ್ನಲ್ಲೇ ಪ್ರಮುಖ ಅಪರಾಧಗಳ ವಿಚಾರಣೆ ನಡೆಸುವ ರಷ್ಯಾದ ಉನ್ನತ ಮಟ್ಟದ ಸಮಿತಿ ತನಿಖೆಗಿಳಿದಿದೆ. ಈ ದಾಳಿಯ ಹಿಂದೆ ಉಕ್ರೇನಿಯನ್ ವಿಶೇಷ ಪಡೆಗಳ ಕೈವಾಡವಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದೇ ರೀತಿಯ ಘಟನೆಯಲ್ಲಿ, ಏಪ್ರಿಲ್ನಲ್ಲಿ ಮಾಸ್ಕೋ ಬಳಿ ನಡೆದ ಕಾರು ಸ್ಫೋಟದಲ್ಲಿ ಜನರಲ್ ಸ್ಟಾಫ್ನ ಡೆಪ್ಯೂಟಿ ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಸಹ ಕೊಲ್ಲಲ್ಪಟ್ಟಿದ್ದರು.


