
ಪ್ರಗತಿವಾಹಿನಿ ಸುದ್ದಿ: ಜಮ್ಮು ಮತ್ತು ಕಾಶ್ಮೀರದ ಮೇಲೆ ಮಿಸೈಲ್ ಗಳಿಂದ ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನದ ಎರಡು ಫೈಟರ್ ಜೇಟ್ ವಿಮಾನಗಳನ್ನು ಭಾರತ ಸೇನೆ ಹೊಡೆದುರುಳಿಸಿದೆ
ಮೂಲಗಳ ಪ್ರಕಾರ, 2 ಪಾಕಿಸ್ತಾನಿ ಜೆಟ್ಗಳ ಪೈಕಿ ಒಂದನ್ನು ಶ್ರೀನಗರದ ಲಾಸ್ಟನ್ ಬಳಿ ಹೊಡೆದುರುಳಿಸಲಾಗಿದೆ ಮತ್ತು ಇನ್ನೊಂದನ್ನು ಉತ್ತರ ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿದೆ.
ಅಮೆರಿಕದಿಂದ ಖರೀದಿ ಮಾಡಿದ್ದ ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಅನ್ನು ಭಾರತದ ಬಲಿಷ್ಠ ವಾಯು ಸೇನೆ ಹೊಡೆದುರಳಿಸಿದೆ. ಜಮ್ಮು ವಿಮಾನ ನಿಲ್ದಾಣದ ಬಳಿ ಸೇನಾ ನೆಲೆಯನ್ನು ಟಾರ್ಗೆಟ್ ಮಾಡಿದ್ದ ಪಾಕ್ ದಾಳಿಗೆ ಮುಂದಾಗಿತ್ತು.
ಎರಡು ಎಫ್- 16 ಯುದ್ಧ ವಿಮಾನಗಳನ್ನು ಭಾರತದ ವಾಯು ಸೇನೆ ನೆಲಕ್ಕುರುಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತೆ ಭಾರೀ ಪೆಟ್ಟು ಬಿದ್ದಂತೆ ಆಗಿದೆ.