ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಂಗಾರ ಖರೀದಿ ನೆಪ ಮಾಡಿಕೊಂಡು ಬಂದು ಪಿಸ್ತೂಲ್ ತೋರಿಸಿ 3 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಅಪಹರಿಸಿಕೊಂಡು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 27 ರಂದು ಸಾಯಂಕಾಲ ೬-೩೦ ಗಂಟೆಗೆ ಸುಮಾರಿಗೆ ೨೫ ರಿಂದ ೩೦ ವರ್ಷದ ವ್ಯಕ್ತಿ ಸಚಿನ್ ನಾರಾಯಣ ಬಾಂದಿವಾಡೆಕರ (ಸಾ: ಮನಂ ೨೮/೨ ಗುಮ್ಮಟಮಾಳ ಹಿಂದವಾಡಿ ಬೆಳಗಾವಿ) ಮಾಲೀಕತ್ವದ ಹಿಂಡಲಗಾ ರೋಡ ವಿಜಯನಗರದಲ್ಲಿರುವ ಸಮೃದ್ಧಿ ಜ್ಯುವೆಲರ್ಸ ಅಂಗಡಿಯಲ್ಲಿ ತನಗೆ ಬಂಗಾರದ ನಕ್ಲೆಸ್ ಬೇಕಾಗಿದೆ ಎಂದು ಹೇಳುತ್ತಾ ಬಂದು ಬಂಗಾರದ ನಕ್ಲೆಸಗಳನ್ನು ತೋರಿಸಿರಿ ಎಂದು ಕೇಳಿ, ೪ ಬಂಗಾರದ ನಕ್ಲೇಸ್ ಗಳನ್ನು ಟ್ರೇಯಲ್ಲಿ ಇಡು ಎಂದು ಹೇಳಿ, ಆರೋಪಿತನು ರೂ. ೩ ಲಕ್ಷ ಮೌಲ್ಯದ ೪ ಬಂಗಾರದ ನಕ್ಲೇಸ್ ತೆಗೆದುಕೊಂಡವನೇ ತನ್ನ ಜೇಬಿನಲ್ಲಿದ್ದ ಒಂದು ಪಿಸ್ತೂಲ್ನ್ನು ತೆಗೆದು ಅಂಗಡಿ ಮಾಲಿಕನ ಕಡೆಗೆ ಹಿಡಿದು ಬೆದರಿಕೆ ಹಾಕುತ್ತ ಬಂಗಾರದ ನಕ್ಲೇಸ್ಗಳನ್ನು ತೆಗೆದುಕೊಂಡು ಮೋಟರ್ ಸೈಕಲ್ ಮೇಲೆ ಹತ್ತಿ ಹೋಗಿದ್ದ.
ಸಚಿನ್ ರವರು ನೀಡಿದ ದೂರನ್ನು ಸ್ವೀಕರಿಸಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತನ ಪತ್ತೆಗೆ ಜಾಲ ಬೀಸಿ, ಮಾಹಿತಿ ಕಲೆಹಾಕಿ ಆರೋಪಿತನಾದ ವೈಭವ ರಾಜೇಂದ್ರ ಪಾಟೀಲ, (೨೯) (ಸಾ: ಸಾಯಿ ಆನಂದ ಬಂಗಲೆ, ಸಂತ ಜ್ಞಾನೇಶ್ವರ ನಗರ, ಮಜಗಾಂವ, ಬೆಳಗಾವಿ) ಈತನನ್ನು ವಶಕ್ಕೆ ಪಡೆದುಕೊಂಡು ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ಆತನು ಅಪರಾಧದ ಬಗ್ಗೆ ಒಪ್ಪಿಕೊಂಡು ಬಂಗಾರದ ಅಂಗಡಿಯಲ್ಲಿ ಸುಲಿಗೆ ಮಾಡಿದ ರೂ.೩ ಲಕ್ಷ ಮೌಲ್ಯದ ಬಂಗಾರದ ೪ ನಕ್ಲೇಸಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಂಟ್ರಿ ಪಿಸ್ತೂಲ, ೩ ಜೀವಂತ ಗುಂಡು & ಮೋಟರ್ ಸೈಕಲ್ನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿತನ ಪತ್ತೆ ಮಾಡುವಲ್ಲಿ ಎ ಚಂದ್ರಪ್ಪ ಎ.ಸಿ.ಪಿ ಖಡೆಬಜಾರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಡಿ ಸಂತೋಷಕುಮಾರ ಪಿಐ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಅವರ ಅಧೀನ ಸಿಬ್ಬಂದಿಗಳಾದ ಬಿ.ಆರ್. ಡೂಗ್ ಎಎಸ್ಐ, ಎಸ್ ಎಂ ಬಾಂಗಿ ಎಎಸ್ಐ, ಎಂ ವಾಯ್ ಹುಕ್ಕೇರಿ ಎಎಸ್ಐ, ಬಿ ಬಿ ಗೌಡರ ಸಿಎಚ್ಸಿ, ಎಂ ಎ ಪಾಟೀಲ, ಬಿ.ಎಮ್. ನರಗುಂದ, ಬಿ ಎಸ್ ರುದ್ರಾಪೂರ, ಎ.ಬಿ. ಘಟ್ಟದ, ಯು ಎಂ ಥೈಕಾರ, ಎಸ್ ಎಚ್ ತಳವಾರ ಇವರೆಲ್ಲರ ತಂಡ ಯಶಸ್ವಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ