ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಲಿಗೆಕೋರರನ್ನು ಬಂಧಿಸಿರುವ ಟಿಳಕವಾಡಿ ಪೊಲೀಸರು 3.20 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
೩೦/೧೧/೨೦೨೦ ರಂದು ರಾತ್ರಿ ೯ ಗಂಟೆಗೆ ಶೋಭಾ ಗುರುರಾವ್ ಕಾಥವಟೆ (ಸಾಃ ಮ.ನಂ.೪೧೯ ಶಿವಾಜಿ ಕಾಲನಿ ತಿಲಕವಾಡಿ ಬೆಳಗಾವಿ) ಇವರ ಮನೆಗೆ ಇಬ್ಬರು ವಾಶಿಂಗ್ ಮಶಿನ್ ರಿಪೇರಿ ಮಾಡುವ ನೆಪ ಮಾಡಿಕೊಂಡು ಮನೆ ಒಳಗೆ ಬಂದು ಸುಲಿಗೆ ಮಾಡಿದ್ದರು.
ವಾಶಿಂಗ್ ಮಶಿನ ರಿಪೇರಿ ಮಾಡುವಂತೆ ನಟಿಸಿ ಶೋಭಾ ಅವರ ಬಾಯಿ ಮುಚ್ಚಿ ಗಾಯಗೊಳಿಸಿದ್ದಲ್ಲದೆ ಅವರ ಕೊರಳಲ್ಲಿಯ ಬಂಗಾರದ ಮಂಗಳಸೂತ್ರ, ಬಂಗಾರದ ಚೈನ್, ಬಂಗಾರದ ಬಳೆಗಳು-೦೪ನ್ನು ಅಪಹರಿಸಿ, ಆಕೆಯ ಗಂಡ ಗುರುರಾವ್ ಕಾಥವಟೆ ಅವರ ತಲೆ ಜಜ್ಜಿ ಗಾಯಗೊಳಿಸಿದ್ದರು. ಅವರ ಕೊರಳಲ್ಲಿಯ ಬಂಗಾರದ ಚೈನ್, ಕೈಬೆರಳಲ್ಲಿಯ ಬಂಗಾರದ ಉಂಗುರ, ೨೫,೦೦೦ ರೂ ಹೀಗೆ ಒಟ್ಟು ರೂ.೩,೪೫,೦೦೦/-ಗಳ ಮಾಲನ್ನು ಮತ್ತು ೨ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡು ಹೋಗಿದ್ದರು.
ದೂರನ್ನು ಸ್ವೀಕರಿಸಿದ ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಮಾರುತಿ ಪರಶುರಾಮ ಜಾಧವ (೨೬) (ಸಾಃಮ.ನಂ.೧೬೬೭ ವಿಶಾಲ ಗಲ್ಲಿ ಕಂಗ್ರಾಳಿ ಕೆ.ಎಚ್. ಬೆಳಗಾವಿ), ಶುಭಂ ರಾಜು ಬಾತಖಂಡೆ (೨೫) (ಸಾಃ ಮ.ನಂ.೮ ವೈಭವ ನಗರ ಬೆಳಗಾವಿ) ಇವರನ್ನು ವಶಕ್ಕೆ ಪಡೆದುಕೊಂಡು ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ಅವರು ಕೃತ್ಯದ ಬಗ್ಗೆ ಒಪ್ಪಿಕೊಂಡರು.
ಅವರಿಂದ ಸುಲಿಗೆ ಮಾಡಿದ ರೂ.೩,೨೦,೦೦೦/- ಮೌಲ್ಯದ ಬಂಗಾರದ ಮಂಗಳಸೂತ್ರ ಒಂದು, ಬಂಗಾರದ ಚೈನ-೦೨, ಬಂಗಾರದ ಬಳೆಗಳು-೦೪, ಬಂಗಾರದ ಉಂಗುರ-೦೧ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎ ಚಂದ್ರಪ್ಪ (ಎಸಿಪಿ ಖಡೇಬಜಾರ ಉಪವಿಭಾಗ) ಮಾರ್ಗದರ್ಶನದಲ್ಲಿ ವಿನಾಯಕ ಬಡಿಗೇರ (ಪಿಐ ತಿಳಕವಾಡಿ ಪೊಲೀಸ್ ಠಾಣೆ) ಹಾಗೂ ಅವರ ಅಧೀನ ಸಿಬ್ಬಂದಿಗಳಾದ ಎಂ.ವೈ.ಕಾರಿಮನಿ ಪಿಎಸ್‌ಐ(ಅವಿ), ಮಣಿಕಂಠ ಎ ಪೂಜಾರಿ ಪಿಎಸ್‌ಐ(ಕಾ&ಸು, ಪ್ರಭಾಕರ ಭೂಸಿ, ಸೂರ್ಯಕಾಂತ ಬಾಬನ್ನವರ, ಅಕ್ಷಯ ಮಹೇಂದ್ರಕರ, ರಮೇಶ ಅಕ್ಕಿ ಕಾರ್ಯಾಚರಣೆ ನಡೆಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ