Kannada NewsKarnataka NewsLatest

ಸುಳ್ಳು ಆಡಿಯೊ ಮಾಡಿದಾತನ ಬಂಧನ; ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಂದಿಗೆ ಹಮಜಾ ಎಂಬ ವ್ಯಕ್ತಿ ಮೋಬೈಲ್‌ನಲ್ಲಿ ಸಂಭಾಷಣೆ ಮಾಡುತ್ತ ಜಿಲ್ಲಾಡಳಿತದ ಬಗ್ಗೆ ಸಂಶಯಾತ್ಮಕವಾಗಿ ಮಾತನಾಡುತ್ತ ಸುಳ್ಳು ಸುದ್ದಿಯ ಅಡಿಯೋವನ್ನು ವಾಟ್ಸಆಪ್ ಮುಖಾಂತರ ಹರಿಬಿಟ್ಟು ಕೋಮು ಸೌಹಾರ್ದತೆ, ಸಾಮಾಜಿಕ ಸ್ವಾಸ್ತ್ಯಕ್ಕೆ ದಕ್ಕೆ ತರಲು ಯತ್ನಿಸಿದ್ದ. ಆತನನ್ನು   ಬಂಧಿಸಿರುವ ಎಪಿಎಂಸಿ ಠಾಣೆ ಪೊಲೀಸರು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಕೊರೋನಾ ವೈರಸ್ ಸಂಬಂಧ ಯಾವುದೇ ತಪ್ಪು ಮಾಹಿತಿ ಅಥವಾ ಯಾವುದೇ ಒಂದು ಕೋಮಿನ ಬಗ್ಗೆ ಪರ-ವಿರೋಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಮೂಲಕವಾಗಲಿ ಅಥವಾ ಧ್ವನಿಸುರಳಿಯ ಮೂಲಕವಾಗಲಿ ಮಾಹಿತಿಗಳನ್ನು ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅಂತಹ ಯಾವುದೇ ಚಟುವಟಿಕೆಯಲ್ಲಿ ಕೈಗೊಳ್ಳಬಾರದೆಂದು  ಪೊಲೀಸರು ಸೂಚಿಸಿದ್ದಾರೆ.

 ಸಂಚಾರ ಮಾರ್ಗ ಬದಲಾವಣೆ

ಬೆಳಗಾವಿ ನಗರ ಪ್ರದೇಶದ ಕ್ಯಾಂಪ ಪ್ರದೇಶದ ಕಸಾಯಿ ಗಲ್ಲಿಯಲ್ಲಿ ಕೋರೊನಾ ವೈರಸ್ ಸೊಂಕು ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಆ ಪ್ರದೇಶದ ೩ ಕಿಮೀ. ಅಂತರದವರೆಗಿನ ಪ್ರದೇಶವನ್ನು ಮುಂದಿನ ಆದೇಶವಾಗುವವರೆಗೆ ಕ್ಯಾಂಪ ಪ್ರದೇಶದ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಹಾಗೂ ನಿಷೇಧಿತ ಪ್ರದೇಶದ ಹೊರಗಿನ ೨ ಕಿಮೀ. ವ್ಯಾಪ್ತಿಯನ್ನು ಬಫರ್ ಝೋನ್  ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂದಿನ ಆದೇಶವಾಗುವವರೆಗೆ ನಗರದಲ್ಲಿ ಅಗತ್ಯ ವಸ್ತುಗಳ ಸರಬರಾಜು ಮಾಡುವ ಹಾಗೂ ತುರ್ತು ಸೇವೆ ಒದಗಿಸುವ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗ ಈ ಕೇಳಗಿನಂತೆ ಇರುತ್ತದೆ.

೧. ಕ್ಯಾಂಪ ಪ್ರದೇಶ ಪ್ರವೇಶಿಸುವ ತುರ್ತು ಸೇವೆ, ವೈದ್ಯಕೀಯ ಸೇವೆ ಒದಗಿಸುವ ವಾಹನಗಳಿಗೆ ನಗರದ ಚನ್ನಮ್ಮ ಸರ್ಕಲ್ ಗಣೇಶ ಮಂದಿರ ಹಿಂದೆ ಮಿಲನ ಹೊಟೇಲ್ ಹತ್ತಿರ ಆಗಮನ ಹಾಗೂ ನಿರ್ಗಮನಕ್ಕೆ ಒಂದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿ ಇನ್ನುಳಿದವರಿಗೆ ಸಂಚರಿಸಲು ಸಂಪೂರ್ಣ ನಿಬಂಧಿಸಲಾಗಿದೆ.

೨. ಜಿಲ್ಲಾ ಆಸ್ಪತ್ರೆ ಸುತ್ತ ಮುತ್ತಲೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಮತ್ತು ತುರ್ತು ಸೇವೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

೩. ಚನ್ನಮ್ಮಾ ಸರ್ಕಲ್ ದಿಂದ ಪೀರನವಾಡಿ ಕಡೆಗೆ ಹಾಗೂ ಪೀರನವಾಡಿ ಯಿಂದ ಚನ್ನಮ್ಮ ಸರ್ಕಲ್ ಕಡೆಗೆ ಸಂಚರಿಸುವವರು ಆರ್‌ಟಿಓ ಸರ್ಕಲ್, ಕಿಲ್ಲಾಕೆರೆ ಅಶೋಕ ಪಿಲ್ಲರ, ಸರ್ಕಿಟ್ ಹೌಸ್, ಜೀಜಾಮಾತಾ ಸರ್ಕಲ್, ದೇಶಪಾಂಡೆ ಪೆಟ್ರೋಲ್ ಪಂಪ್, ಪಿಂಪಳ ಕಟ್ಟಾ, ಶನಿ ಮಂದಿರ, ಕಪಲೇಶ್ವರ ಓವರ ಬ್ರಿಜ್, ಬ್ಯಾಂಕ ಆಫ್ ಇಂಡಿಯಾ, ಮಹಾತ್ಮಾ ಫುಲೆ ರಸ್ತೆ, ಗೋವಾ ವೇಸ್, ಆರ್‌ಪಿಡಿ ಸರ್ಕಲ್, ೩ನೇ ರೇಲ್ವೆ ಗೇಟ, ಪೀರನವಾಡಿ ಮಾರ್ಗವನ್ನು ಬಳಸುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button