Kannada NewsKarnataka News

  2 ಲಕ್ಷ ರೂ. ಬಂಗಾರ ಲಪಟಾಯಿಸಿದ್ದ ಮನೆ ಕೆಲಸದವಳ ಬಂಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಸುಮಾರು 2 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕದ್ದಿದ್ದ ಮನೆ ಕೆಲಸದವಳನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಂದನಾ ನಾಮದೇವ ರೇಡೆಕರ ಇವರ ಮನೆಯಿಂದ  ಮನೆಯ ಕೆಲಸದ ಆಳು  ಸುನೀತಾ ವಸಂತ ಮಂಜಾಳಕರ (ಸಾ: ಮನಂ ೧೦೮ ಲಕ್ಷ್ಮೀನಗರ ಗುರುದೇವಗಲ್ಲಿ ವಡಗಾಂವ ಹಾಲಿ ಲಕ್ಷ್ಮೀ ಟೇಕಡಿ) ಆಭರಣಗಳನ್ನು ಕದ್ದಿದ್ದಳು.  ಅ.9-11ರ ಮಧ್ಯೆ ಮನೆಯ ಬೆಡರೂಮ್ ಲ್ಲಿ ಇರುವ ವಾರ್ಡರೋಬ್‌ದ ಡ್ರಾವರ್‌ದಲ್ಲಿದ್ದ ೫೦ ಗ್ರಾಂ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಳು.  ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಂಶಯುಕ್ತ ಆರೋಪಿತಳಾದ ಸುನೀತಾ ವಸಂತ ಮಂಜಾಳಕರಳನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ  ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾಳೆ.

ಅವಳಿಂದ ಕಳುವು ಮಾಡಿ ಬಚ್ಚಿಟ್ಟ ಸುಮಾರು 2 ಲಕ್ಷ ರೂ. ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಬೈಕ್ ಕಳ್ಳನಿಗಾಗಿ ಶೋಧ

ಮೋಸತನದಿಂದ ಮೋಟಾರ್ ಸೈಕಲ್ ನ್ನು ತೆಗೆದುಕೊಂಡು ಹೋದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಹುಲ ಸಂಜಯ ಕಾಕಡೆ (ಸಾ: ಅರವಿಂದ ಕಾಂಪ್ಲೆಕ್ಷ, ಮಾರುತಿ ಗಲ್ಲಿ ಬೆಳಗಾವಿ) ಇವರು ಖಡೆಬಜಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಕಪ್ಪು ಬಣ್ಣದ ಬಜಾಜ ಪಲ್ಸರ್ ೨೨೦ ಸಿಸಿ ಮೋಟಾರ ಸೈಕಲ್ (ನಂ.ಕೆಎ-೦೫/ಎಚ್‌ಎಕ್ಸ-೯೭೫೫)ನ್ನು ಓಎಲ್‌ಎಕ್ಸ್ ನಲ್ಲಿ ಮಾರಾಟಕ್ಕೆಂದು ಹಾಕಿದ್ದನ್ನು ನೋಡಿ ಅಪರಿಚಿತ ೨೫-೩೦ ವರ್ಷ ವಯಸ್ಸಿನ ವ್ಯಕ್ತಿ ಮೊಬೈಲ್‌ನಲ್ಲಿ ನಕಲಿ ವಾಟ್ಸಪ್ ಅಕೌಂಟನ್ನು ತೆಗೆದು ಫಿರ್ಯಾದಿಯಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾನೆ.

ನಂತರ ೦೫/೧೦/೨೦೧೯ ರಂದು ೧೬೦೦ ಗಂಟೆಯಿಂದ ೧೬.೩೦ ಗಂಟೆಯ ನಡುವಿನ ವೇಳೆಯಲ್ಲಿ   ಮಾರುತಿ ಗಲ್ಲಿಯಲ್ಲಿರುವ ಅರವಿಂದ ಟೆಕ್ಸಟೈಲ್‌ಗೆ ಬಂದು ಮೋಟಾರ ಸೈಕಲ್‌ನ್ನು ನೋಡಿ ರೂ.೫೮,೦೦೦/- ಗಳಿಗೆ ಖರೀದಿಸುವ ಬಗ್ಗೆ ಮಾತನಾಡಿದ್ದಾನೆ.

ತನ್ನ ಮೊಬೈಲ್‌ನಲ್ಲಿ ಗಾಡಿಯ ದಾಖಲಾತಿಗಳ ಫೋಟೊ ತೆಗೆದುಕೊಂಡು, ಮೋಟಾರ್ ಸೈಕಲ್‌ನ್ನು ಒಂದು ಸಾರಿ ಚೆಕ್ ಮಾಡಿ ನೋಡುತ್ತೇನೆ ಎಂದಿದ್ದಾನೆ. ಅರವಿಂದರವರು ತಮ್ಮ ಅಂಗಡಿಯ ಕೆಲಸಗಾರನ ಜೊತೆ ಕೂಡ್ರಿಸಿ ಕಳುಹಿಸಿಕೊಟ್ಟಿದ್ದರು. ಆದರೆ ಆ ವ್ಯಕ್ತಿಯು ಸ್ವಲ್ಪ ಮುಂದೆ ಮೋಟಾರ ಸೈಕಲ್‌ನ್ನು ನಡೆಯಿಸಿಕೊಂಡು ಹೋಗಿ ಗಾಡಿಯಲ್ಲಿ ಬೇರೆ ಏನೋ ಶಬ್ದ ಬರುತ್ತಿದೆ ನೋಡು ಎಂದು ಹೇಳಿ ಹಿಂದೆ ಕುಳಿತವನನ್ನು ಕೆಳಗೆ ಇಳಿಸಿದ್ದಾನೆ. ನಂತರ ಮೋಟಾರ್ ಸೈಕಲ್‌ನ್ನು ಚಾಲು ಮಾಡಿ ಹೊಡೆದುಕೊಂಡು ಹೋಗಿದ್ದಾನೆ.

ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಭಾವಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯೇ ಆ ಆರೋಪಿಯಾಗಿದ್ದು, ಅವನ ಸುಳಿವು ಸಿಕ್ಕಲ್ಲಿ ಅಥವಾ ಯಾವುದೆ ಮಾಹಿತಿ ಇದ್ದಲ್ಲಿ ಪೊಲೀಸ್ ಇನ್ಸಪೆಕ್ಟರ್ ಖಡೇಬಜಾರ ಪೊಲೀಸ ಠಾಣೆ (ಫೋನ ನಂ:(೦೮೩೧) ೨೪೦೫೨೩೨ / ೯೪೮೦೮೦೪೦೫೦) ಸಂಪರ್ಕಿಸಲು ಕೋರಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button