ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ಎಪಿಎಂಸಿ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿದ್ದು, 2.40 ಲಕ್ಷ ರೂ. ಮೌಲ್ಯದ ಬಂಗಾರದ 80 ಗ್ರಾಂ ಆಭರಣಗಳನ್ನು ಜಪ್ತು ಮಾಡಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸದಾಶಿವ ನಗರದಲ್ಲಿ ನಿವೃತ್ತ ಅರಣ್ಯಾಧಿಕಾರಿ ತುಕಾರಾಮ ಸಂದಿಮನಿ ಎನ್ನುವವರ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಗಾಗಿ ಬಲೆ ಬೀಸಿದ್ದ ಎಪಿಎಂಸಿ ಠಾಣೆಯ ಪಿಐ ಹಾಗೂ ಅವರ ತಂಡ ಆರೋಪಿಯ ಜಾಡು ಹಿಡಿದು ಅವನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಅಬ್ದುಲರಶೀದ @ ವಿಲಿಯಂ ತಂದೆ ಅಬ್ದುಲಮಜೀದ @ ಕೈತಾನ ಶೇಖ @ ಪೊರ್ತಾಡ ಸಾ: ಮುಂಡಗೋಡ ಹಾಲಿ: ಮಡಗಾಂವ ಗೋವಾ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಆ ಮನೆಯಲ್ಲಿ ಸಿಕ್ಕ ಬಂಗಾರದ ಆಭರಣಗಳನ್ನು ಸಂದೀಪ ವಿಠ್ಠಲ ಚೌಗುಲೆ (೪೬) ಸಾ: ಮನೆ ನಂ: ೭೫೦ ಭಾಗ್ಯ ನಗರ ೨ ನೇ ಕ್ರಾಸ್ ಟಿಳಕವಾಡಿ ಅನಗೋಳ ಈತನಿಗೆ ಕೊಟ್ಟಿದ್ದ.
ಇಬ್ಬರನ್ನೂ ಬಂಧಿಸಲಾಗಿದ್ದು, ಕಳುವು ಮಾಡಿದ ಸುಮಾರು 2.40 ಲಕ್ಷ ರೂ ಮೌಲ್ಯದ 80 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತ ಪಡಿಸಿಕೊಳ್ಳಲಾಗಿದೆ.
ಎನ್.ವಿ.ಬರಮನಿ ಎಸಿಪಿ ಮಾರ್ಕೆಟ್ ರವರ ಮಾರ್ಗದರ್ಶನದಲ್ಲಿ ಈ ಮನೆಗಳ್ಳತನ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾದ ಎಪಿಎಂಸಿ ಠಾಣೆಯ ಪಿಐ ಜಾವೀದ ಎಫ್.ಮುಶಾಪುರಿ ನೇತೃತ್ವದಲ್ಲಿ ಮಣಿಕಂಠ ಪೂಜಾರ ಪ್ರೊ.ಪಿ.ಎಸ್.ಐ., ಬಿ.ಕೆ.ಮಿಟಗಾರ ಎ.ಎಸ್.ಐ. ಎಸ್.ಎನ್.ಪಾಟೀಲ ಎ.ಎಸ್.ಐ., ಎಸ್.ಜಿ.ಕುಗಟೋಳಿ, ಎನ್.ಎಸ್ ಭೀಮಗೋಳ ಇವರ ತಂಡದ ಈ ಕಾರ್ಯವನ್ನು ಪೊಲೀಸ್ ಆಯುಕ್ತ ಬಿ. ಎಸ್. ಲೋಕೇಶಕುಮಾರ, ಡಿಸಿಪಿಗಳಾದ ಸೀಮಾ ಲಾಟ್ಕರ್ ಹಾಗೂ ಯಶೋಧಾ ವಂಟಗೂಡಿ ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ