Belagavi NewsBelgaum NewsKannada NewsKarnataka News

*ಬೈಕ್ ಕಳ್ಳತನ ಮಾಡುತ್ತಿದ್ದ ಖತರನಾಕ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಆಗಿರುವ ಬೈಕ್ ಕಳ್ಳತನ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಖತರನಾಕ್ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾ ಉಪ-ಪೊಲೀಸ್ ಆಯುಕ್ತ (ಅ&ಸಂ) ಸ್ನೇಹ ಪಿ ವಿ ಮತ್ತು ಸಹಾಯಕ ಪೊಲೀಸ್ ಆಯುಕ್ತ ಗಂಗಾಧರ ಬಿ ಎಮ್ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ  ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಜುಲೈ 10 ರಂದು ಆರೋಪಿ ಆಜಾದ್ ಮೆಹಬೂಬಸುಭಾನಿ ಕೀಲ್ಲೆದಾರನನ್ನು ಬಂಧಿಸಿದ್ದಾರೆ. 

ಅಪರಾಧ ಸಂಖ್ಯೆ 62/2024 ಕಲಂ 379 IPC ನೇದ್ದರಲ್ಲಿ ದಸ್ತಗಿರಿ ಮಾಡಿ ಈತನಿಂದ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ  ಮಾಡಿದ ಒಂದು ಮೋಟಾರ್ ಸೈಕಲ್ ಮತ್ತು  ಬೇರೆ ಬೇರೆ ಠಾಣಾ ವ್ಯಾಪ್ತಿಯ 4 ಮೋಟಾರ್  ಸೈಕಲ್ ಗಳನ್ನು ಹೀಗೆ ಒಟ್ಟು 1,50,000 ಬೆಲೆಯ 5 ಹೀರೊ ಕಂಪನಿಯ ಮೋಟಾರ್  ಸೈಕಲ್ ಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದಿದ್ದಾರೆ.

ತನಿಖಾತಂಡದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಟಿ ಬಿ ನೀಲಗಾರ, ಪಿ.ಎಸ್.ಐ ಎಸ್ ಆರ್ ಮುತ್ತತ್ತಿ ಮತ್ತು ಅವಿನಾಶ್ ಎ ವೈ , ಸಿ ಎಚ್ ಸಿ ಗಳಾದ ಅರುಣ ಕಾಂಬಳೆ , ಸಿಪಿಸಿಗಳಾದ  ಎಸ್ ಬಿ ಬಾಬಣ್ಣವರ, ಪ್ರಭಾಕರ ಭೂಸಿ, ರಾಜು ಕೆಳಗಿನಮನಿ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ   ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button