Kannada NewsKarnataka NewsNational

*ತಂದೆ ಹಾಗೂ ಸಹೋದರನನ್ನು ಕೊಂದು ಪರಾರಿಯಾಗಿದ್ದ ಬಾಲಕಿಯ ಬಂಧನ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಗಾಗಿ ತನ್ನ ಸ್ವಂತ ತಂದೆ ಮತ್ತು ಒಂಬತ್ತು ವರ್ಷದ ಸಹೋದರನನ್ನು ಕೊಂದು ಶವಗಳನ್ನು ಫ್ರೀಜರ್‌ನಲ್ಲಿ ತುಂಬಿ ಪರಾರಿಯಾಗಿದ್ದ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. 

Home add -Advt

10ನೇ ತರಗತಿ ಓದುತಿದ್ದ ಬಾಲಕಿ ತನ್ನ ತಂದೆ ಹಾಗೂ 9 ವರ್ಷದ ಸಹೋದರನ್ನು ಕೊಂದು ದೇಹದ ಬಾಗವನ್ನು ಕತ್ತರಿಸಿದ ಅಮಾನವೀಯ ಘಟನೆ ಜಬಲ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಮಿಲೇನಿಯಮ್ ಸೊಸೈಟಿಯಲ್ಲಿ ಎರಡು ತಿಂಗಳ ಹಿಂದೆ ನಡೆದಿತ್ತು.

ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಲೆಗೈದು ತಲೆ ಮರೆಸಿಕೊಂಡಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಹರಿದ್ವಾರ ಪೊಲೀಸರು ಮೇ 29ರಂದು ಬಂಧಿಸಿದ್ದಾರೆ.

ಮಾರ್ಚ್ 15 ರಂದು ಬಾಲಕಿ ತನ್ನ ತಂದೆ ಮತ್ತು ತಮ್ಮನನ್ನು ಕೊಂದು ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಳು. ಬಳಿಕ ತನ್ನ ಲವರ್ ಜೊತೆ ಪರಾರಿಯಾಗಿದ್ದಳು.

Related Articles

Back to top button