ಪ್ರಗತಿವಾಹಿನಿ ಸುದ್ದಿ, ಅಥಣಿ – ನೀರಿನ ಪಾಳಿಗಾಗಿ ಜಗಳವಾಡಿ, ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ.
ಶಂಕರ ಸದಾಶಿವ ಮಾದರ, ಸದಾಶಿವ ಸಿದ್ರಾಮ ಮಾದರ, ಸುನೀಲ ಸದಾಶಿವ ಮಾದರ (ಸಾ|| ಎಲ್ಲರೂ ಕೊಕಟನೂರ) ಬಂಧಿತರು.
ಮಹಾದೇವ ಸಿದ್ರಾಮ ಮಾದರ (ವಯಾ 51 ವರ್ಷ ಸಾ|| ಕೊಕಟನೂರ) ಇವನು ಹಾಗೂ ಸದಾಶಿವ ಸಿದ್ರಾಮ ಮಾದರ (ಸಾ|| ಕೊಕಟನೂರ) ಇವರಿಬ್ಬರೂ ಖಾಸ ಅಣ್ಣತಮ್ಮಂದಿರು. ಇವರ ತಂದೆ ಸಿದ್ರಾಮ ರಾಮಪ್ಪ ಮಾದರ ಇವರ ಹೆಸರಿನಲ್ಲಿರುವ ಜಮೀನದಲ್ಲಿರುವ ಬಾವಿಯ ನೀರಿನ ಪಾಳಿಯ ಸಲುವಾಗಿ ಜಗಳ ನಡೆದಿತ್ತು.
ಇತ್ತೀಚೆಗೆ ಸದಾಶಿವ ಸರಾಯಿ ಕುಡಿದು ಬಂದು ತಂಟೆ ಮಾಡಿದ್ದಕ್ಕೆ ಮಹಾದೇವ ಸದಾಶಿವ ಸಿದ್ರಾಮ ಮಾದರನಿಗೆ ಬಡಿದು ನೆಲಕ್ಕೆ ಕೆಡವಿ, ಕುತ್ತಿಗೆಯ ಮೇಲೆ ಕಾಲು ಇಟ್ಟಿದ್ದಾನೆ. ಈ ವೇಳೆ ಸದಾಶಿವನ ಮಗ ಶಂಕರ ಇವನು ಮಹಾದೇವನಿಗೆ ಬಡಿಯಲು ಬಂದಿದ್ದಾನೆ. ಈ ವೇಳೆ ಮಹಾದೇವನ ಹೆಂಡತಿ ರೇಖಾ (ವಯಾ 45 ವರ್ಷ) ಶಂಕರನಿಗೆ ಬೈದಿದ್ದಕ್ಕೆ ಆರೋಪಿತರಾದ ಆರೋಪಿತರಾದ 1) ಶಂಕರ ಸದಾಶಿವ ಮಾದರ 2) ಸದಾಶಿವ ಸಿದ್ರಾಮ ಮಾದರ 3) ಸುನೀಲ ಸದಾಶಿವ ಮಾದರ (ಸಾ|| ಎಲ್ಲರೂ ಕೊಕಟನೂರ) ಇವರು ಮಹಾದೇವ ಮತ್ತು ಅತ್ತೆ ರೇಖಾ ಇವಳ ಮೇಲೆ ಸಿಟ್ಟಾಗಿ ಕೊಲೆ ಮಾಡಲು ತಮ್ಮ ಮನೆಯಲ್ಲಿ ಸಂಚು ಮಾಡಿ, ತಮ್ಮ ರೇಶನ ಕಾರ್ಡದಿಂದ ಬಂದ 5 ಲೀಟರ್ ಸೀಮೆ ಎಣ್ಣೆಯನ್ನು ತೆಗೆದುಕೊಂಡು ಬಂದು ಸುರಿದು ಬೆಳಗಿನ ಜಾವ 2 ಗಂಟೆಗೆ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮನೆಯಲ್ಲಿ ಮಲಗಿಕೊಂಡಿದ್ದ ಮಹಾದೇವ ಸಿದ್ರಾಮ ಮಾದರ ಮತ್ತು ರೇಖಾ ಕೋಂ ಮಹಾದೇವ ಆಸ್ಪತ್ರೆಗೆ ದಾಖಲಾಗಿದ್ದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಆರೋಪಿಗಳನ್ನು ಬಂಧವಾರ ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ