Latest

ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ !

ಪ್ರಗತಿವಾಹಿನಿ ಸುದ್ದಿ, ಹೇಗ್ : ಉಕ್ರೈನ್ – ರಷ್ಯಾ ಯುದ್ದದ ಪರಿಣಾಮ ಎಲ್ಲಿಗೆ ಹೋಗಿ ತಲುಪುತ್ತದೆಯೋ ತಿಳಿಯದು. ಸಿ ಎನ್ ಎನ್ ನ ಈಗಿನ ವರದಿಯ ಪ್ರಕಾರ ಕಾನೂನು ಬಾಹಿರವಾಗಿ ಉಕ್ರೇನ್ ಮಕ್ಕಳನ್ನು ರಷ್ಯಾಗೆ ಗಡೀಪಾರು ಮಾಡಿದ ಆರೋಪ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಹೊರಿಸಲಾಗಿದೆ. ಜೊತೆಗೆ ರಷ್ಯಾದ ಅಧಿಕಾರಿ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಶುಕ್ರವಾರ ಬಂಧನ ವಾರಂಟ್ ಹೊರಡಿಸಿದೆ.

ಇದು ಜಗತ್ತಿನ ಬಲಿಷ್ಠ ರಾಷ್ಟ್ರವೊಂದರ ಮೇಲೆ, ಅದರಲ್ಲೂ ವಿಶ್ವ ಸಂಸ್ಥೆಯಲ್ಲಿ ವೀಟೋ ಚಲಾವಣೆಯ ಅಧಿಕಾರ ಹೊಂದಿರುವ ದೇಶ ಎಂಬುದನ್ನಿಲ್ಲಿ ಗಮನಿಸಬೇಕು.

ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದಂತೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಮಕ್ಕಳನ್ನುಕಾನೂನುಬಾಹಿರವಾಗಿ ರವಾನಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಕಾರಣರಾಗಿದ್ದಾರೆ. ಇದು ಅಂತರಾಷ್ಟ್ರೀಯ ಕಾಯಿದೆಯನ್ನು ಉಲ್ಲಂಘಿಸಲಾಗಿದೆ ಎಂದಿದೆ.

ಸತತ ಒಂದು ವರ್ಷದಿಂದ ಕಾಳಗಕ್ಕಿಳಿದಿರುವ ರಷ್ಯಾ ಯುದ್ಧದ ಸಮಯದಲ್ಲಿ ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ಮಾಡಿದ ಯುದ್ಧ ಅಪರಾಧಗಳಿಗೆ ಅಧ್ಯಕ್ಷ ಪುಟಿನ್ ರನ್ನು ಹೊಣೆಗಾರರನ್ನಾಗಿಸಿದೆ ಎಂದು ಹೇಗ್ ನಲ್ಲಿರುವ ಐಸಿಸಿ ತಿಳಿಸಿದೆ.

Home add -Advt

https://pragati.taskdun.com/11th-annual-convocation-of-ranichannamma-university-on-20th-mar/
https://pragati.taskdun.com/north-korea-has-a-terrible-weapon-america-can-be-reached-in-33-minutes/
https://pragati.taskdun.com/kpcc-president-d-k-shivakumar-visit-belagavi-today/

Related Articles

Back to top button