ಪ್ರಗತಿ ವಾಹಿನಿ ಸುದ್ದಿ, ಧಾರವಾಡ: ಧಾರವಾಡದ ಆರ್ಟ್ ಗ್ಯಾಲರಿಯಲ್ಲಿ ದಾವಣಗೆರೆಯ ದೃಶ್ಯ ಕಲಾವಿದ ಹರೀಶ್ ಹೆಡ್ಡನವರ್ ರವರ ‘ದೃಶ್ಯಾಂತರಂಗ’ಶೀರ್ಷಿಕೆಯ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಮೂರು ದಿನಗಳ ಕಾಲ ಪ್ರದರ್ಶನ ನಡೆಯಲಿದೆ.
ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ಧಾರವಾಡದ ಕಲಾವಿದ ಸುರೇಶ ಹಾಲಭಾವಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ದಾವಣಗೆರೆ ವಿ ವಿ ಯ ಫ್ಯಾಶನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ ಡಾ.ಜೈರಾಜ ಚಿಕ್ಕ ಪಾಟೀಲ ಕಾರ್ಯ ಕ್ರಮ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಸರ್ಕಾರಿ ಚಿತ್ರ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಕುರಿಯವರ್ ಅತಿಥಿಯಾಗಿ ಭಾಗವಹಿಸಿದ್ದರು.
ಕಲಾವಿದ ಹರೀಶ್ ಹೆಡ್ಡನವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ದತ್ತಾತ್ರೇಯ ಎನ್. ಭಟ್ಟ ಮಾಡಿದರು. ನಾಗವೇಣಿ ಹೆಡ್ಡನವರ್ ಮತ್ತು ಪ್ರತಿಭಾ ಪ್ರಾರ್ಥನೆ ಹಾಡಿದರು. ಹರೀಶ್ ಹೆಡ್ಡನವರ್ ಸ್ವಾಗತಿಸಿ ವಂದಿಸಿದರು.
ಪ್ರಸ್ತುತ ಕಲಾ ಪ್ರದರ್ಶನ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಏರ್ಪಟ್ಟಿದ್ದು ಜನವರಿ 1ರಿಂದ. 3ರ ವರೆಗೆ ಧಾರವಾಡದ ಸರ್ಕಾರಿ ಚಿತ್ರ ಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ.
ಹರೀಶ್ ಹೆಡ್ಡನವರ ರವರ ಸುಮಾರು 33 ನಿಸರ್ಗ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಇವುಗಳಲ್ಲಿ ಬಹಳಷ್ಟು ಹಾಳೆಯ ಮೇಲೆ ಜಲವರ್ಣದಿಂದ ರಚಿಸಿದವುಗಳು.ಕೆಲವು ಮಾತ್ರ ಪೆನ್ ದಿಂದ ರಚಿಸಿದ ರೇಖಾಚಿತ್ರಗಳು.
ಕ್ವಾರ್ಟರ್ ಸೈಜಿನ ಹಾಳೆಯ ಮೇಲೆ ಬಿಡಿಸಿದ ಚಿತ್ರಗಳಿವು. ದಾವಣಗೆರೆ, ಹಂಪಿ ಭಾಗಗಳ ಆಯ್ದ ಸ್ಥಳಗಳನ್ನು ಹರೀಶ್ ರವರು ಚಿತ್ರಿಸಿದ್ದಾರೆ.
https://pragati.taskdun.com/d-k-shivakumarreactionvidhanasabha-election/
|
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ