Latest

*ಅರುಣಾಚಲದಲ್ಲಿ ನಿಲ್ಲದ ಚೀನಾದ ಉಪಟಳ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅರುಣಾಚಲ ಗಡಿಯಲ್ಲಿ ಸೇನಾ ಚಟುವಟಿಕೆಗಳು ಗರಿಗೆದರಿವೆ. ಕಾರಣ ಆ ಗಡಿ ಭಾಗದಲ್ಲಿ ಚೀನಾಕ್ಕೆ ಸೇರಿದ ಜೆಟ್ ವಿಮಾನಗಳು ಹಾರಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕಾರಣದಿಂದ ಭಾರತದ ಯುದ್ದ ವಿಮಾನಗಳು ಇದೀಗ ಪಹರೆ ನಡೆಸುತ್ತಿವೆ. ಮೇಲಿಂದ ಮೇಲೆ ಗಡಿ ರೇಖೆಯನ್ನು ದಾಟಿ ಬರುವುದು ಹೊಸ ವಿಷಯವಲ್ಲ. “ಅದೇ ರಾಗ ಅದೇ ಹಾಡು’ ಎಂಬಂತೆ, ಚೀನಾ ತನ್ನ ಕುತಂತ್ರಗಳನ್ನು ಯಾವತ್ತೂ ಮುಂದುವರೆಸುತ್ತಲೇ ಇರುತ್ತದೆ. ಭಾರತ ಇತ್ತೀಚೆಗೆ ರಫೆಲ್‌ ಯುದ್ದ ವಿಮಾನಗಳನ್ನು ಖರಿದೀಸಿದ್ದು, ತನ್ನ ಯುದ್ದ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಅದಕ್ಕಂತೂ ಸಹಿಸದ ವಿಷಯವಾಗಿದೆ.

ಈ ಹಿಂದೆಯೂ ಗಡಿರೇಖೆಯನ್ನು ದಾಟಿ ಬಂದಾಗ ಬಂದಾಗ, ಕೈ ಕೈ ಮಿಲಾಯಿಸಿದ್ದಿದೆ. ಮಲ್ಲಯುದ್ದವೂ ನಡೆದಿದ್ದಿದೆ. ಇನ್ನು ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಎರೆಡೂ ಕಡೆಯವರಿಗೂ ಅದು ಬೇಕಿಲ್ಲ. ಆರ್ಥಿಕ ನಷ್ಟ ಮಾಡಿಕೊಳ್ಳಲು ಎರೆಡೂ ಕಡೆಗೂ ಸಿದ್ದರಿಲ್ಲ. ಆದಾಗ್ಯೂ ವಾರದಲ್ಲಿ ಮೂರು ಬಾರಿ ವಾಯು ಪ್ರದೇಶದಲ್ಲಿ ಗಸ್ತು ನಡೆಸುವುದನ್ನು ಖಚಿತಪಡಿಸಿದೆ.

ಕಾಂಗ್ರೆಸ್ ಈ ವಿಷಯದ ಮೇಲೆ ಸಂಸತ್ತಿನಲ್ಲಿ ಅಧಿಕೃತವಾಗಿ ಚರ್ಚಿಸಲು ಕೋರಿ, ಇದರ ಬಗೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಬಯಸಿತ್ತು.ಅದಕ್ಕೆ ಸಚಿವರು ಸರಿಯಾಗಿ ಸ್ಪಂದಿಸಿದ್ದಾರೆ.

Home add -Advt

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉಲ್ಲಂಘಿಸುವ ಚೀನಾ ಸೈನಿಕರ ಪ್ರಯತ್ನವನ್ನು ಡಿಸೆಂಬರ್ 9 ರಂದು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆಂದು, ಯಾವುದೇ ತೆರನಾದ ಪ್ರಾಣ ಹಾನಿ ಸಂಭವಿಸಿಲ್ಲವೆಂದೂ ಸಚಿವರು ಸಂಸತ್ತಿನಲ್ಲಿ ತಿಳಿಸಿದ್ದಾರೆ.‌

*ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಆದೇಶ*

https://pragati.taskdun.com/murugha-mathaadalitadhikari-p-s-vastradappoint/

*ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ಸ್ಥಾಪನೆಗೆ ಹಿಂದೂ ಜನ ಜಾಗೃತಿ ಸಮಿತಿ ಒತ್ತಾಯ*

https://pragati.taskdun.com/hindu-jana-jagruti-samitibelagaviabhay-patillave-jihad-virodhi-police-dala/

Related Articles

Back to top button