ಅಶೋಕ್ ಟ್ರ್ಯಾಪ್ ಸಂಚು ಬಯಲಾಗುತ್ತಿದ್ದಂತೆ ಮುನಿರತ್ನನಿಂದ ಬಿಜೆಪಿ ದೂರ ದೂರ; ಆತನ ದುಷ್ಕೃತ್ಯ ಒಂದೇ? ಎರಡೇ?
ಪ್ರಗತಿವಾಹಿನಿ ಸುದ್ದಿ: ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನೂ ಏಡ್ಸ್ ಟ್ರ್ಯಾಪ್ ಮಾಡುವ ಸಂಚು ಮಾಡಲಾಗಿತ್ತು ಎನ್ನುವ ವಿಷಯ ಬಯಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮುುನಿರತ್ನ ಪ್ರಕರಣದಿಂದ ದೂರ ಸರಿದಿದೆ.
ನಿನ್ನೆವರೆಗೆ ಮುನಿರತ್ನರನ್ನು ಸಮರ್ಥನೆ ಮಾಡುತ್ತಿದ್ದ ಅಶೋಕ್ ಇಂದು ತಮ್ಮನ್ನೂ ಬಲಿ ಹಾಕುವ ಸಂಚುವ ನಡೆದಿತ್ತು ಎನ್ನುವ ವಿಷಯ ಕೇಳುತ್ತಲೇ ಬೆಚ್ಚಿ ಬಿದ್ದಿದ್ದಾರೆ. ನಾವು ಮುನಿರತ್ನ ಅವರನ್ನು ಸಮರ್ಥನೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುನಿರತ್ನ ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯಾಗಲಿ, ಸತ್ಯ ಹೊರಬರಲಿ ಎಂದಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ನಾಯಕರು ಮುನಿರತ್ನ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಈ ಮಧ್ಯೆ ಒಕ್ಕಲಿಗ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುನಿ ರತ್ನ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡುವಂತೆ ಆಗ್ರಹಿಸಿದ್ದಾರೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಗೃಹ ಸಚಿವರಿಗೆ ಸೂಚಿಸಿದ್ದಾರೆ. ಹಾಗಾಗಿ ಎಸ್ಐಟಿ ರಚನೆ ಬಹುತೇಕ ನಿಶ್ಚಿತವಾಗಿದೆ.
ಈ ಮಧ್ಯೆ, ಮುನಿರತ್ನ ತನ್ನ ವಿರೋಧಿಗಳನ್ನು ಮಣಿಸಲಿ ಹನಿಟ್ರ್ಯಾಪ್ ಮತ್ತು ಏಡ್ಸ್ ಟ್ರ್ಯಾಪ್ ಬಳಸುತ್ತಿದ್ದ ಎಂದು ಆತನ ವಿರುದ್ಧ ದೂರು ನೀಡಿರುವ ಮಹಿಳೆ ಆರೋಪಿಸಿದ್ದಾಳೆ. ಬಿಜೆಪಿ ನಾಯಕ ಆರ್.ಅಶೋಕ ಅವರಿಗೂ ಜನ್ಮ ದಿನದ ಶುಭಾಶಯ ಹೇಳುವ ನೆಪದಲ್ಲಿ ಹೂಗುಚ್ಛ ಕೊಡುವಾಗ ಏಡ್ಸ್ ಬ್ಲಡ್ ಟ್ರಾನ್ಸ್ ಫರ್ ಮಾಡುವ ಸಂಚು ರೂಪಿಸಲಾಗಿತ್ತು ಎನ್ನುವ ವಿಷಯ ಕೂಡ ಬಹಿರಂಗವಾಗಿದೆ.
ತನ್ನ ರಾಜಕೀಯ ಎದುರಾಳಿಗಳಿಗೆ ಏಡ್ಸ್ ಹೊಂದಿರುವ ಮಹಿಳೆ ಕಳುಹಿಸಿ ಹನಿಟ್ರ್ಯಾಪ್ ಮಾಡುವ ಇಲ್ಲವೇ ಅವರ ಮಕ್ಕಳಿಗೆ ಏಡ್ಸ್ ಬ್ಲಡ್ ಟ್ರಾನ್ಸ್ ಫರ್ ಮಾಡುವ ಕೆಲಸಕ್ಕೂ ಆತ ಕೈ ಹಾಕುತ್ತಿದ್ದ ಎಂದು ಮಹಿಳೆ ಖಾಸಗಿ ಟಿವಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾಳೆ. ನನ್ನನ್ನೇ ಬಳಸಿಕೊಂಡು ಮಹಿಳೆಯೋರ್ವಳನ್ನು ವೇಶ್ಯೆಯ ರೀತಿಯಲ್ಲಿ ಬಿಂಬಿಸಲಾಗಿದೆ, ಇದಕ್ಕಾಗಿ ಆಕೆಯನ್ನು ಬೇರೆ ಬೇರೆ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದೆ ಎಂದೂ ಆಕೆ ದೂರಿದ್ದಾಳೆ.
ಈ ಹಿಂದೆ ಒಮ್ಮೆ ಮುನಿರತ್ನ ಕಾಟ ತಾಳಲಾರದೆ ದೂರು ನೀಡಿದ್ದೆ, ಆದರೆ ಆತ ನನ್ನನ್ನು ಕರೆದು ನಿಮ್ಮ ಮಗನ ಮೇಲೆ ಎಷ್ಟು ಚಕ್ರದ ಲಾರಿ ಹತ್ತಿಸಬೇಕು ಎಂದು ಕೇಳಿ ಬೇದರಿಸಿದ್ದರಿಂದ ದೂರು ಹಿಂಪಡೆದಿದ್ದೆ ಎಂದೂ ಮಹಿಳೆ ಭಯಾನಕ ವಿಷಯಗಳನ್ನು ಬಹಿರಗಂಪಡಿಸಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ