Karnataka News

*ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಜಿಲ್ಲೆಗಳಲ್ಲಿ ಕನ್ನಡ ಜ್ಯೋತಿ ರಥ ಸಂಚಾರ*

ಯಾವ ಜಿಲ್ಲೆಗೆ ಎಂದು ಬರಲಿದೆ ಕನ್ನಡ ಜ್ಯೋತಿ ರಥ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಗತಿವಾಹಿನಿ ಸುದ್ದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21 ಹಾಗೂ 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಇದರ ಕನ್ನಡ ಜ್ಯೋತಿ ರಥಕ್ಕೆ ಸೆಪ್ಟೆಂಬರ್ 22ರಂದು ಉತ್ತರ ಕನ್ನಡದ ಭುವನೇಶ್ವರಿ ದೇವಾಲಯದ ಆವರಣದಿಂದ ಚಾಲನೆ ನೀಡಲಾಗುವುದು.

Home add -Advt

ರಥವು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸಂಚರಿಸಲಿದ್ದು, ಸೆಪ್ಟೆಂಬರ್ 22 ರಿಂದ 25 ರವರೆಗೆ ಉತ್ತರ ಕನ್ನಡ ಜಿಲ್ಲೆ ಯ ಸಿದ್ದಾಪುರ, ಹೊನ್ನಾವರ, ಕುಮಟ, ಅಂಕೋಲ, ಕಾರವಾರ, ಕಾಣಕೋಣ(ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿಯಲ್ಲಿ ಸಂಚರಿಸಿ ಹಾವೇರಿ ತಲುಪಲಿದೆ.

ಸೆಪ್ಟೆಂಬರ್ 26 ಮತ್ತು 27 ರಂದು ಹಾವೇರಿ ಜಿಲ್ಲೆ ಯ ಹಾನಗಲ್ಲ, ಹಿರೇಕೇರೂರು, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಸವಣೂರು, ಶಿಗ್ಲಾಂವದಲ್ಲಿ ಸಂಚರಿಸಿ ಗದಗ ಜಿಲ್ಲೆ ತಲುಪಲಿದೆ.

ಸೆಪ್ಟೆಂಬರ್ 28 ಮತ್ತು 29 ರಂದು ಗದಗ ಜಿಲ್ಲೆ ಯ ಲಕ್ಷ್ಮೀಶ್ವರ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ರೋಣ, ನರಗುಂದ, ಗದಗ, ಬೆಟಗೇರಿಯಲ್ಲಿ ಸಂಚರಿಸಿ ಧಾರವಾಡ ಜಿಲ್ಲೆ ತಲುಪಲಿದೆ.

ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 01 ರಂದು ಧಾರವಾಡ ಜಿಲ್ಲೆ ಯ ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಳ್ನಾವರದಲ್ಲಿ ಸಂಚರಿಸಿ ಬೆಳಗಾವಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 02 ರಿಂದ 05 ರವರೆಗೆ ಬೆಳಗಾವಿ ಜಿಲ್ಲೆ ಯ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಬೆಳಗಾವಿ, ಗೋಕಾಕ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಕಾಗವಾಡ, ಅಥಣಿಯಲ್ಲಿ ಸಂಚರಿಸಿ ಬಾಗಲಕೋಟೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 06 ಹಾಗೂ 07 ರಂದು ಬಾಗಲಕೋಟೆ ಜಿಲ್ಲೆ ಯ ಜಮಖಂಡಿ, ಮಹಲಿಂಗಾಪುರ, ಮುಧೋಳ, ಬಾಗಲಕೋಟೆ, ಹುನಗುಂದ, ಕೂಡಲಸಂಗಮದಲ್ಲಿ ಸಂಚರಿಸಿ ವಿಜಯಪುರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 08 ಹಾಗೂ 09 ರಂದು ವಿಜಯಪುರ ಜಿಲ್ಲೆ ಯ ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ, ಬಬಲೇಶ್ವರ, ತಿಕೋಟಾ, ವಿಜಯಪುರ, ಚಡಚಣ, ಇಂಡಿ, ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಬಸವನ ಬಾಗೇವಾಡಿಯಲ್ಲಿ ಸಂಚರಿಸಿ ಕಲಬುರಗಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 10 ಹಾಗೂ 11 ರಂದು ಕಲಬುರಗಿ ಜಿಲ್ಲೆ ಯ ಯಡ್ರಾಮಿ, ಜೀವರ್ಗಿ, ಅಫಜಲ್ಪುರ, ಅಳಂದ, ಕಲಬುರಗಿ, ಶಹಾಪುರ, ಚಿತ್ತಾಪುರ, ಸೇಡಂ, ಕಾಳಗಿ, ಚಿಂಚೋಳಿ, ಕಮಲಾಪುರದಲ್ಲಿ ಸಂಚರಿಸಿ ಬೀದರ್ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 12 ಹಾಗೂ 13 ರಂದು ಬೀದರ್ ಜಿಲ್ಲೆ ಯ ಬಸವಕಲ್ಯಾಣ, ಹುಮದಾಬಾದ್, ಹುಲಸೂರು, ಭಾಲ್ಕಿ, ಔರದ್, ಬೀದರ್, ಚಿಟಗುಪ್ಪಾದಲ್ಲಿ ಸಂಚರಿಸಿ ಯಾದಗಿರಿ ಜಿಲ್ಲೆಗೆ ತಲುಪಲಿದೆ.

ಅಕ್ಟೋಬರ್ 14 ಮತ್ತು 15 ರಂದು ಯಾದಗಿರಿ ಜಿಲ್ಲೆ ಯ ಗುರುಮಠಕಲ್, ಯಾದಗಿರಿ, ವಡಗೇರಾ, ಶಹಾಪುರ, ಸುರಪುರ, ಹುಣಸಗಿ, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರದಲ್ಲಿ ಸಂಚರಿಸಿ ರಾಯಚೂರು ಜಿಲ್ಲೆ ತಲುಪಲಿದೆ.

ಅಕ್ಟೋಬರ್ 16 ಮತ್ತು 17 ರಂದು ರಾಯಚೂರು ಜಿಲ್ಲೆ ಯ ಲಿಂಗಸೂಗೂರು, ದೇವದುರ್ಗ, ರಾಯಚೂರು, ಮಾನ್ವಿ, ಶಿರವಾರ, ಮಸ್ಕಿ, ಸಿಂಧನೂರು ಇಲ್ಲಿ ಸಂಚರಿಸಿ ಕೊಪ್ಪಳ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 18 ಮತ್ತು 19 ರಂದು ಕೊಪ್ಪಳ ಜಿಲ್ಲೆ ಯ ಕುಷ್ಟಗಿ, ಯಲಬುರ್ಗಾ, ಕುಕನೂರು, ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿಯಲ್ಲಿ ಸಂಚರಿಸಿ ಬಳ್ಳಾರಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 20 ಮತ್ತು 21 ರಂದು ಬಳ್ಳಾರಿ ಜಿಲ್ಲೆ ಯ ಸಿರಗುಪ್ಪ, ಕುರುಗೋಡ, ಬಳ್ಳಾರಿ, ಸಂಡೂರು, ಕಂಪ್ಲಿಯಲ್ಲಿ ಸಂಚರಿಸಿ ವಿಜಯನಗರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 22 ಮತ್ತು 23 ರಂದು ವಿಜಯನಗರ ಜಿಲ್ಲೆ ಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿಯಲ್ಲಿ ಸಂಚರಿಸಿ ದಾವಣಗೆರೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 24 ಮತ್ತು 25 ರಂದು ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿಯಲ್ಲಿ ಸಂಚರಿಸಿ ಶಿವಮೊಗ್ಗ ಜಿಲ್ಲೆ ತಲುಪಲಿದೆ.

*ಅಕ್ಟೋಬರ್ 26 ರಿಂದ 28 ರವರೆಗೆ ಶಿವಮೊಗ್ಗ ಜಿಲ್ಲೆ ಯ ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿಯಲ್ಲಿ ಸಂಚರಿಸಿ ಚಿತ್ರದುರ್ಗ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 29 ರಿಂದ 31 ರವರೆಗೆ ಚಿತ್ರದುರ್ಗ ಜಿಲ್ಲೆ ಯ ಹೊಳಲ್ಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಪರಶುರಾಮಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರದಲ್ಲಿ ಸಂಚರಿಸಿ ಚಿಕ್ಕಮಗಳೂರು ಜಿಲ್ಲೆ ತಲುಪಲಿದೆ.

ನವೆಂಬರ್ 01 ರಿಂದ 04 ರವರೆಗೆ ಚಿಕ್ಕಮಗಳೂರು ಜಿಲ್ಲೆ ಯ ಅಜ್ಜಂಪುರ, ಕಡೂರು, ತರಿಕೆರೆ, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಕಳಸದಲ್ಲಿ ಸಂಚರಿಸಿ ಉಡುಪಿ ಜಿಲ್ಲೆ ತಲುಪಲಿದೆ.

ನವೆಂಬರ್ 05 ಹಾಗೂ 06 ರಂದು ಉಡುಪಿ ಜಿಲ್ಲೆ ಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳದಲ್ಲಿ ಸಂಚರಿಸಿ ದಕ್ಷಿಣ ಕನ್ನಡ ಜಿಲ್ಲೆ ತಲುಪಲಿದೆ.

ನವೆಂಬರ್ 07 ರಿಂದ 09 ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಯ ಮೂಡುಬಿದಿರೆ, ಮಂಗಳೂರು, ಕಾಸರಗೋಡು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯದಲ್ಲಿ ಸಂಚರಿಸಿ ಕೊಡಗು ಜಿಲ್ಲೆ ತಲುಪಲಿದೆ.

ನವೆಂಬರ್ 10 ಹಾಗೂ 11 ರಂದು ಕೊಡಗು ಜಿಲ್ಲೆ ಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಪುನ್ನಂಪೇಟೆ, ಸೋಮವಾರಪೇಟೆಯಲ್ಲಿ ಸಂಚರಿಸಿ ಹಾಸನ ಜಿಲ್ಲೆ ತಲುಪಲಿದೆ.

ನವೆಂಬರ್ 12 ರಿಂದ 14 ರವರೆಗೆ ಹಾಸನ ಜಿಲ್ಲೆ ಯ ಅರಕಲಗೂಡು, ಹೊಳೆನರಸಿಪುರ, ಚನ್ನರಾಯಪಟ್ಟಣ, ಹಾಸನ, ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆಯಲ್ಲಿ ಸಂಚರಿಸಿ ತುಮಕೂರು ಜಿಲ್ಲೆ ತಲುಪಲಿದೆ.

ನವೆಂಬರ್ 15 ರಿಂದ 18 ರವರೆಗೆ ತುಮಕೂರು ಜಿಲ್ಲೆ ಯ ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರದಲ್ಲಿ ಸಂಚರಿಸಿ ಚಿಕ್ಕಬಳ್ಳಾಪುರ ಜಿಲ್ಲೆ ತಲುಪಲಿದೆ.

ನವೆಂಬರ್ 19 ಹಾಗೂ 20 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಯ ಗೌರಿಬಿದನೂರು, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಾಘಟ್ಟ, ಬಾಗೇಪಲ್ಲಿ, ಚಿಂತಾಮಣಿ, ಚೇಳೂರಿನಲ್ಲಿ ಸಂಚರಿಸಿ ಕೋಲಾರ ಜಿಲ್ಲೆ ತಲುಪಲಿದೆ.

ನವೆಂಬರ್ 21 ರಿಂದ 23 ರವರೆಗೆ ಕೋಲಾರ ಜಿಲ್ಲೆ ಯ ಕೋಲಾರ, ಬಂಗಾರಪೇಟೆ ಹಾಗೂ ಕೆ.ಜಿ.ಎಫ್‌ನಲ್ಲಿ ಸಂಚರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ತಲುಪಲಿದೆ.

ನವೆಂಬರ್ 24 ರಿಂದ 26 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್‌ಪೇಟೆ, ದೊಡ್ಡಬೆಳವಂಗಲದಲ್ಲಿ ಸಂಚರಿಸಿ ಬೆಂಗಳೂರು ನಗರ ಜಿಲ್ಲೆ ತಲುಪಲಿದೆ.

ನವೆಂಬರ್ 27 ರಿಂದ 30 ರವರೆಗೆ ಬೆಂಗಳೂರು ನಗರ ಜಿಲ್ಲೆ ಯ ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜಪುರಂನಲ್ಲಿ ಸಂಚರಿಸಿ ರಾಮನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 01 ರಿಂದ 03 ರವರೆಗೆ ರಾಮನಗರ ಜಿಲ್ಲೆ ಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿಯಲ್ಲಿ ಸಂಚರಿಸಿ ಚಾಮರಾಜನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 04 ರಿಂದ 06 ರವರೆಗೆ ಚಾಮರಾಜನಗರ ಜಿಲ್ಲೆ ಯ ಕೊಳ್ಳೇಗಾಲ, ಹನೂರು, ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಂಚರಿಸಿ ಮೈಸೂರು ಜಿಲ್ಲೆ ತಲುಪಲಿದೆ.

ಡಿಸೆಂಬರ್ 07 ರಿಂದ 10 ರವರೆಗೆ ಮೈಸೂರು ಜಿಲ್ಲೆ ಯ ಸರಗೂರು, ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್ ನಗರ, ಸಾಲಿಗ್ರಾಮ, ಮೈಸೂರು, ನಂಜನಗೂಡು, ಟಿ.ನರಸೀಪುರದಲ್ಲಿ ಸಂಚರಿಸಿ ಮಂಡ್ಯ ಜಿಲ್ಲೆ ತಲುಪಲಿದೆ.

Related Articles

Back to top button