Kannada NewsKarnataka NewsPolitics

*ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ, ಜೆಡಿಎಸ್ ಸೇರಲು ಮುಂದಾಗಿದ್ದಾರೆ: ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ: ಅಸಮಾಧಾನಗೊಂಡ ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ ಹಾಗೂ ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆದಾಗಿಂದಲೂ ಸಿದ್ದರಾಮಯ್ಯ ಅವರ ಮಾತು ನಡೀತಿಲ್ಲ. ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಯೂಸ್ ಆಂಡ್ ತ್ರೋ ಥರ ನೋಡ್ತಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಕರಿಬೇವಿನ ಸೊಪ್ಪಿನ ತರ, ಒಗ್ಗರಣೆಗೆ ಬಳಸಿ ಬಳಿಕ ಬಿಸಾಡುವ ಹಾಗೆ ಸಿದ್ದರಾಮಯ್ಯ ಅವರನ್ನ ನಡೆಸಿಕೊಳ್ಳಲಾಗಿದೆ. ಇತರೆ ನಾಯಕರೂ ಕಾಂಗ್ರೆಸ್‌ನಲ್ಲಿ ಅಸಮಧಾನ ಆಗಿದ್ದಾರೆ. ಬಹಳ ಜನ ಬೇರೆ ಪಕ್ಷ ಸೇರಲು ತಯಾರಿ ಮಾಡಿಕೊಳ್ತಿದ್ದಾರೆ. 

ಬಿಜೆಪಿ – ಜೆಡಿಎಸ್ ಸೇರಲು ಬಹಳ ಜನ ಸಂಪರ್ಕ ಮಾಡ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಹಳ ಜನ ಕಾಂಗ್ರೆಸ್ ಬಿಟ್ಟು ಎನ್‌ಡಿಎ ಒಕ್ಕೂಟ ಸೇರ್ತಾರೆ ಎಂದರು.

2028ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಎನ್‌ಡಿಎ ಒಕ್ಕೂಟ ಸೇರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ತೆಗೆದಾಗಲೇ ಅವರಿಗೆ ಗೌರವ ಕೊಡಲಿಲ್ಲ. 3 ತಿಂಗಳು ಕಾಲಾವಕಾಶ ಕೊಡದೇ ಸಿಎಂ ಸ್ಥಾನದಿಂದ ಇಳಿಸಿದ್ರು. ಸಿಎಂ ಸ್ಥಾನದಿಂದ ಇಳಿಸಿದ್ದೇಕೆ ಅನ್ನೋದಕ್ಕೆ ರಾಹುಲ್ ಗಾಂಧಿ ಇನ್ನೂ ಕಾರಣ ಕೊಟ್ಟಿಲ್ಲ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button