*ಪತ್ನಿ ಬಿಟ್ಟು ವಿವಾಹಿತ ಮಹಿಳೆಯ ಹಿಂದೆ ಬಿದ್ದ ಟ್ಯಾಟೂ ಆರ್ಟಿಸ್ಟ್; ಲಕ್ಷ ಲಕ್ಷ ಹಣ ಪಡೆದು ಹಲ್ಲೆ ನಡೆಸಿದ ವಂಚಕಿ*

ಪ್ರಗತಿವಾಹಿನಿ ಸುದ್ದಿ: ಟ್ಯಾಟೂ ಆರ್ಟಿಸ್ಟ್ ಓರ್ವ ವಿವಾಹಿತ ಮಹಿಳೆಯ ಹಿಂದೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ಟ್ಯಾಟೂ ಆರ್ಟಿಸ್ಟ್ ಕಮ್ ನಟನಿಂದ ಮಹಿಳೆ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾಳೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಪ್ರಖ್ಯಾತ ಘೋಸ್ಟ್ ಟ್ಯಾಟೂ ಆರ್ಟಿಸ್ಟ್ ಖ್ಯಾತಿಯ ಅರ್ಜುನ್ ವಂಚನೆಗೊಳಗಾದವರು. ಮಹಿಳೆ ಅರ್ಜುನ್ ಮೇಲೆ ರಾಡಿನಿಂದ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಅರ್ಜುನ್ ಗೆ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು. ಸಂಪ್ರಿತಾಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ಗಂಡ ಕಾರಣಾಂತರಗಳಿಂದ ಮೃತಪಟ್ಟಿದ್ದಾಗಿ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಪರಿಚಯ ಮಾಡಿಕೊಂಡಿದ್ದಳು.
ಹೀಗೆ ಆರಂಭವಾದ ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ನಂತರ ಅರ್ಜುನ್‌ಗೆ ಪತ್ನಿಗೆ ವಿಚ್ಛೇದನ ನೀಡಿ ಸಂಪ್ರಿತಾಳನ್ನು ವಿವಾಹವಾಗಲು ಮುಂದಾಗಿದ್ದ. ಅರ್ಜುನ್ ಬಳಿ ಮದುವೆಯಾಗುವುದಾಗಿ ಸಂಪ್ರಿತ ಹೇಳಿದ್ದಳು. ಮಹಿಳೆ ನಂಬಿ ಟ್ಯಾಟೂ ಘೋಸ್ಟ್ ಅರ್ಜುನ್ ಹಲವು ಬಾರಿ ಹಣ ಕೊಟ್ಟಿದ್ದನಂತೆ. ಹಣ ವಾಪಸ್ ಕೇಳಿದಾಗ ನಾಳೆ, ನಾಡಿದ್ದು ಅಂತ ಸಂಪ್ರಿತಾ ಕಳೆದ ಒಂದು ವರ್ಷದಿಂದ ಸತಾಯಿಸುತ್ತಿದ್ದಳಂತೆ. ಅಲ್ಲದೇ ಇತ್ತಿಚೆಗೆ ಮದುವೆ ವಿಚಾರವನ್ನೂ ಮುಂದೂಡಿದ್ದಳಂತೆ. ಇದರಿಂದ ಅನುಮಾನಗೊಂಡ ಅರ್ಜುನ್ ಸಂಪ್ರಿತಾಗೆ ಕರೆ ಮಾಡಿದ್ದ. ಕರೆ ಸ್ವೀಕರಿಸದ ಹಿನ್ನೆಲೆ ಆಕೆಯ ಮನೆ ಬಳಿ ಹೋಗಿದ್ದ. ಈ ವೇಳೆ ಸಂಪ್ರಿತಾ ಇನ್ನೋರ್ವ ವ್ಯಕ್ತಿಯ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಅರ್ಹುನ್ ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಕಬ್ಬಿಣದ ರಾಡಿನಿಂದ ಅರ್ಜುನ್‌ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




