ಪ್ರಗತಿವಾಹಿನಿ ಸುದ್ದಿ; ಕೊಲಂಬೋ: ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇನ್ನು 20 ದಿನಗಳಷ್ಟೇ ಬಾಕಿ ಉಳಿದಿವೆ. ತವರು ನೆಲದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡ ಏಷ್ಯಾಕಪ್ ಜಯಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿತು.
ನಿರೀಕ್ಷೆಯಂತೆಯೇ ಟೀಮ್ ಇಂಡಿಯಾ ಆಟಗಾರರು ಗೆಲುವಿನ ನಗೆ ಬೀರಿದರು. ಅದರಲ್ಲೂ ವೇಗಿ ಮೊಹಮದ್ ಸಿರಾಜ್ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದರು. ಕೇವಲ 16 ಎಸೆತಗಳ ಅಂತರದಲ್ಲಿ 5 ವಿಕೆಟ್ ಕಿತ್ತು ಲಂಕಾ ಪತನದಲ್ಲಿ ಪ್ರಮುಖ ಪಾತ್ರವಹಿಸಿದರು.
ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ಪ್ರಮುಖ ಹೈಲೈಟ್ಸ್ ಇಲ್ಲಿವೆ..
- ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು. ಈ ಪೈಕಿ 7 ಬಾರಿ (1984, 1988, 1991, 1995, 2010, 2018, 2023) ಏಕದಿನ ಮಾದರಿಯಲ್ಲಿ ಟ್ರೋಫಿ ಗೆದ್ದರೆ, 2016ರಲ್ಲಿ T20 ಮಾದರಿಯಲ್ಲಿ ಟ್ರೋಫಿ ಗೆದ್ದುಗೊಂಡಿತ್ತು.
- ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಿಗೆ (129) ಮುಕ್ತಾಯಗೊಂಡ ಪಂದ್ಯ ಇದಾಗಿದೆ. ಇದಕ್ಕೂ ಮೊದಲು 2020ರಲ್ಲಿ ನೇಪಾಳ-ಯುಎಸ್‌ಎ ನಡುವಿನ ಪಂದ್ಯ 104 ಎಸೆತಗಳಲ್ಲಿ ಮುಕ್ತಾಯಗೊಂಡರೆ, 2001 ರಲ್ಲಿ ಶ್ರೀಲಂಕಾ-ಜಿಂಬಾಬ್ವೆ ಪಂದ್ಯ 120 ಎಸೆತಗಳಲ್ಲಿ ಮುಕ್ತಾಯಗೊಂಡಿತ್ತು.
- ಭಾರತ ತಂಡ 263 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಜಯಿಸಿತು. ಇದು ಏಕದಿನ ಮಾದರಿ ಫೈನಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಎಸೆತಗಳು ಉಳಿದ ಪಂದ್ಯವಾಗಿದೆ. 2003ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ- ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ 226ಎಸೆತಗಳು ಬಾಕಿ ಉಳಿದಿದ್ದವು.
- ಭಾರತ ತಂಡ ಏಕದಿನ ಮಾದರಿಯಲ್ಲಿ ಅತಿಹೆಚ್ಚು ಬಾಕಿ ಇರುವಂತೆಯೇ ಗೆದ್ದ ಪಂದ್ಯ ಇದಾಗಿದೆ. ಇದಕ್ಕೂ ಮೊದಲು 2001 ರಲ್ಲಿ ಕೀನ್ಯಾ ಎದುರು 231 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು.
- ಭಾರತ ತಂಡ ಏಕದಿನ ಫೈನಲ್ ಪಂದ್ಯಗಳಲ್ಲಿ 2ನೇ ಬಾರಿಗೆ 10 ವಿಕೆಟ್ ಗೆಲುವು ದಾಖಲಿಸಿತು. ಇದಕ್ಕೂ ಮೊದಲು 1998ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ಎದುರು ಈ ಸಾಧನೆ ಮಾಡಿತ್ತು,
- ಭಾರತ ತಂಡ 5 ವರ್ಷಗಳ ಬಳಿಕ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು. 2018ರಲ್ಲಿ ಕಡೇ ಬಾರಿಗೆ ಟ್ರೋಫಿ ಜಯಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ