ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವರ್ಗಾವಣೆಗೊಂಡು 11 ತಿಂಗಳು ಕಳೆದರೂ ಕರ್ತವ್ಯಕ್ಕೆ ಹಾಜರಾಗದೇ ರೋಲ್ ಕಾಲ್ ನಲ್ಲಿ ತೊಡಗಿದ್ದ ಎ ಎಸ್ ಐ ಓರ್ವರನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರಿನ ಉಪ್ಪಾರಪೇಠೆ ಪೊಲೀಸ್ ಠಾಣೆಯಿಂದ ವಿಧಾನಸೌಧ ಠಾಣೆಗೆ ವರ್ಗಾವಣೆಯಾದರೂ ಎ ಎಸ್ ಐ ಶ್ರೀನಿವಾಸ ಶೆಟ್ಟಿ, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಶ್ರೀನಿವಾಸ್ ವಿರುದ್ಧ ಭ್ರಷ್ಟಾಚಾರ, ಅಕ್ರಮ ಆರೋಪಗಳು ಕೇಳಿಬಂದಿದ್ದವು.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಎ ಎಸ್ ಐ ಆಗಿದ್ದ ಶ್ರೀನಿವಾಸ್ ವಿರುದ್ಧ ಲಂಚ ಸ್ವೀಕಾರ, ಕಾನೂನು ಬಾಹಿರ ವ್ಯವಹಾರ ನಡೆಸಲು ಅಪರಾಧಿಗಳೊಂದಿಗೆ ಒಪ್ಪಂದ, ಠಾಣೆಯನ್ನೇ ಅಕ್ರಮಕ್ಕೆ ಅಡ್ಡೆಯನ್ನಾಗಿ ಬಳಸಿಕೊಂಡ ಆರೋಪಗಳಿದ್ದವು. ಕಳೆದ 11 ತಿಂಗಳ ಹಿಂದೆ ಶ್ರೀನಿವಾಸ್ ಅವರನ್ನು ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದಾಗ್ಯೂ ಕರ್ತವ್ಯಕ್ಕೆ ಹಾಜರಾಗದೇ ರೋಲ್ ಕಾಲ್ ಮಾಡಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎ ಎಸ್ ಐ ಶ್ರೀನಿವಾಸ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ