National

*ಮಾಜಿ ಗೃಹ ಸಚಿವರ ಪುತ್ರಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಅಸ್ಸಾಂ ಮಾಜಿ ಗೃಹ ಸಚಿವರ ಪುತ್ರಿ ಮನೆಯ ಎರದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಉಪಾಸನಾ ಫುಕನ್ (28) ಆತ್ಮಹತ್ಯೆಗೆ ಶರಣಾದವರು. ಉಪಾಸನಾ ಅಸ್ಸಾಂ ಮಾಜಿ ಗೃಹ ಸಚಿವ ದಿ.ಭಾರಿಗು ಕುಮಾರ್ ಫುಕನ್ ಅವರ ಮಗಳು. ಉಪಾಸನಾ ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಏಕಾಏಕಿ ಮನೆಯ ಎರಡನೇ ಮಹಡಿಯಿಂದ ಜಿಗಿದು ಉಪಾಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಪಾಸನಾ ಅವರನ್ನು ತಕ್ಷಣ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ಉಪಾಸನಾ ಅವರು ದೀರ್ಘ ಕಾಲದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.

Home add -Advt

Related Articles

Back to top button