ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತ -ಚೀನಾ ಗಡಿ ಪ್ರದೇಶದಲ್ಲಿ ಕಳೆದ ರಾತ್ರಿ ಚೀನಾ ಪ್ರಚೋದಿತ ದಾಳಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.
ಎಲ್ಲ ಸಿದ್ಧತೆಗಳೊಂದಿಗೆ ಬಂದಿದ್ದ ಚೀನಾ ಸೈನಿಕರು ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ. ಎರಡೂ ರಾಷ್ಟ್ರಗಳ ಸೈನಿಕರ ಮಧ್ಯೆ ಮಲ್ಲ ಯುದ್ದ ನಡೆದಿದೆ. ಚೀನಾ ಸೈನಿಕರು ಕೆಲವು ಮಾರಣಾಂತಿಕ ಆಯುಧಗಳನ್ನೂ ಇರಿಸಿಕೊಂಡು ಬಂದಿದ್ದರು.
ಈ ವೇಳೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದು, 17 ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೈನ್ಯ ಅಧಿಕೃತವಾಗಿ ತಿಳಿಸಿದೆ. ಇದೇ ವೇಳೆ 43 ಚೀನಾ ಸೈನಿಕರೂ ಮೃತಪಟ್ಟಿದ್ದಾರೆಂದು ಗೊತ್ತಾಗಿದೆ.
ಹಿಮಾಚಲ ಪ್ರದೇಶ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದ್ದು, ಭಾರತ ಹೆಚ್ಚಿನ ತುಕಡಿಗಳನ್ನು ರವಾನಿಸಿದೆ. ಜೊತೆಗೆ ಎರಡೂ ದೇಶಗಳ ಅಧಿಕಾರಿಗಳ ಮಧ್ಯೆ ಮಾತುಕತೆ ಮುಂದುವರಿದಿದೆ.
ಇದೇ ವೇಳೆ ಪ್ರಧಾನಿ ನಿವಾಸದಲ್ಲಿ ಹಿರಿಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ; ಮೂವರು ಭಾರತೀಯ ಯೋಧರು ಹುತಾತ್ಮ
#BoycottChineseProducts ಅಭಿಯಾನಕ್ಕೆ ಪ್ರಗತಿವಾಹಿನಿ ಬೆಂಬಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ