
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಬ್ಲ್ಯೂ ಎಸ್ ಎಸ್ ಬಿ (ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ)ಯ 13 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಗುತ್ತಿಗೆ ನೌಕರರು ಕೋಟ್ಯಂತರ ರೂಪಾಯಿ ವಂಚನೆ ಎಸಗಿ, ಜಲಮಂಡಳಿಗೆ ಕೋಟೀ ಕೋಟಿ ನಷ್ಟವುಂಟು ಮಾಡಿದ್ದರು. ಗುತ್ತಿಗೆ ನೌಕರರ ವಂಚನೆ ಪತ್ತೆ ಹಚ್ಚಲು ವಿಫರಾದ ಹಿನ್ನೆಲೆಯಲ್ಲಿ 13 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ.
ಜಲಮಂಡಳಿಯ 45 ಉಪವಿಭಾಗಗಳಲ್ಲಿ ಹಣ ದುರ್ಬಳಕೆ ಮಾಡಿದ ಆರೋಪ ಕೇಳಿಬಂದಿತ್ತು. ಹಲವು ಠಾಣೆಗಳಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಹಣ ದುರ್ಬಳಕೆ ಖಚಿತಪಟ್ಟ ಹಿನ್ನೆಲೆಯಲ್ಲಿ ಮಂಡಳಿಯ ಇಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರು ಸೇರಿ 13 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ್, ಸಹಾಯಕ ಭರತ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಶ್ವನಾಥ್, ಹಿರಿಯ ಸಹಾಯಕ ಸಿ.ಸೋಮಶೇಖರ್, ಕಾರ್ಯನಿರ್ವಾಹಕ ಅಭಿಯಂತರ ನಾಗೇಂದ್ರ, ಕಂದಾಯ ವ್ಯವಸ್ಥಾಪಕ ನಾಗರಾಜ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸಚಿನ್ ಪಾಟೀಲ್, ಸಹಾಯಕ ರಾಮಪ್ಪ ಮಡಿವಾಳದ, ಕಾರ್ಯನಿರ್ವಾಹಕ ಅಭಿಯಂತರ ಸ್ನೇಹಾ ವಿ, ಕಂದಾಯ ವ್ಯವಸ್ಥಾಪಕ ಭೀಮಶಂಕರ್, ಹಿರಿಯ ಸಹಾಯಕಿ ಗೀತಾ ಎಂ, ಕಂದಾಯ ವ್ಯವಸ್ಥಾಪಕ ಎನ್.ರುದ್ರೇಶ್, ಸಹಾಯಕ ಕಲ್ಯಾಣಾಧಿಕಾರಿ ಯೋಗೇಶ್ ಎಸ್ ಸೇರಿದಂತೆ 13 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
2ನೇ ಬೂಸ್ಟರ್ ಡೋಸ್ ಅಗತ್ಯವೇ? : ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
https://pragati.taskdun.com/second-booster-dose-not-required-central-health-ministry/