ಪ್ರಗತಿವಾಹಿನಿ ಸುದ್ದಿ, ಜೈಪುರ: ರಾಜಸ್ಥಾನದ ಟೇಲರ್ ಕನ್ಹಯ್ಯಲಾಲ್ ಹತ್ಯೆಗೈದ ಆರೋಪಿಗಳಿಗೆ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ.
ನಾಲ್ವರು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಅಜ್ಮೀರ್ ನಿಂದ ಜೈಪುರದ ಎನ್ ಐಎ ವಿಶೇಷ ಕೋರ್ಟ್ ಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ಉದ್ರಿಕ್ತ ಜನ ಆರೋಪಿಗಳನ್ನು ಹಿಡಿದು ಜಗ್ಗಾಡಿ ಕಪಾಳಮೋಕ್ಷ ಮಾಡಿದರು. ಇವರಲ್ಲಿ ವಕೀಲರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆರೋಪಿತರನ್ನು “ಹೊಡೆಯಿರಿ.. ಬಡಿಯಿರಿ..” ಎಂದು ಆಕ್ರೋಶಿತ ಗುಂಪು ಕೂಗಾಡುತ್ತಿತ್ತು.
ಈ ವೇಳೆ ಪೊಲೀಸರು ಹರಸಾಹಸಪಟ್ಟು ಆರೋಪಿಗಳನ್ನು ಮತ್ತೆ ವ್ಯಾನ್ ನಲ್ಲಿ ಕೂರಿಸಿಕೊಂಡು ಹೋದರು. ನ್ಯಾಯಾಲಯ ಆರೋಪಿಗಳಿಗೆ ಹತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಕ್ಯಾಬಿನ್ ನಲ್ಲಿ ಕಾಣಿಸಿದ ಹೊಗೆ: ದೆಹಲಿಯಿಂದ ಜಬಲ್ ಪುರಕ್ಕೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ