ಪ್ರಗತಿವಾಹಿನಿ ಸುದ್ದಿ: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭೂಮಿಗೆ ಮರಳುವುದು ಇನ್ನಷ್ಟು ವಿಳಂಬವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದೃಢಪಡಿಸಿದೆ.
ಅವರ ‘ಸುಖಕರ ಲ್ಯಾಂಡಿಂಗ್’ನ ಹೊಸ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಅದು ತಿಳಿಸಿದೆ. ಸುನಿತಾ ಮತ್ತು ಅವರ ಸಹಯಾನಿ ಬುಚ್ ವಿಲ್ನೋರ್ ಪ್ರಯಾಣಿಸಿದ್ದ ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿರುವುದರಿಂದ ಮರಳುವುದು ವಿಳಂಬವಾಗಿದೆ. ಸುನಿತಾ, ವಿಲ್ನೋರ್ ಹಾಗೂ ‘ಬಾಹ್ಯಾಕಾಶದ ಮಿನಿ-ಸಿಟಿ’ಯಲ್ಲಿರುವ ಇತರ ಏಳು ಸಿಬ್ಬಂದಿ ಕೂಡ ಸುರಕ್ಷಿತರಾಗಿದ್ದಾರೆ ಎಂದು ನಾಸಾ ತಿಳಿಸಿದೆ. ಸ್ಟಾರ್‌ಲೈನರ್‌ನ ಪ್ರಪ್ರಥಮ ಯಾನದಲ್ಲಿ ತೆರಳಿದ್ದ ಸುನಿತಾ ಮತ್ತು ವಿಲ್ನೋರ್ ಜೂನ್ 5ರಂದು ಐಎಸ್‌ಎಸ್ ತಲುಪಿದ್ದರು.
ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭೂಮಿಗೆ ಮರಳುವುದು ಇನ್ನಷ್ಟು ವಿಳಂಬವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದೃಢಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ