
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಪಿಎಂ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ವಿಶೇಷ ವಿಡಿಯೋ ಶೇರ್ ಮಾಡಿರುವ ಪ್ರಧಾನಿ ಮೋದಿ, ಪ್ರೀತಿಯ ಅಟಲ್ ಜೀ ಪುಣ್ಯಸ್ಮರಣೆಯ ದಿನವಾದ ಇಂದು ನನ್ನ ಶ್ರದ್ಧಾಂಜಲಿ. ಭಾರತ ನಿಮ್ಮ ಉತ್ಕೃಷ್ಟ ಸೇವೆ ಮತ್ತು ರಾಷ್ಟ್ರ ಪ್ರಗತಿಗಾಗಿ ನಿಮ್ಮ ಪ್ರಯತ್ನವನ್ನ ಮರೆಯುವುದಿಲ್ಲ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.
ಮೊದಲಿಗೆ ಅಟಲ್ ಅವರ ‘ಕಾಲ್ ಕೆ ಕಪಾಲ್ ಪರ್ ಕಲಿಖ್ತಾ ಹೂಂ ಮಿಟ್ತಾ ಹೂಂ’ ಕವಿತೆಯ ಸಾಲುಗಳು ಕೇಳಿಸುತ್ತದೆ. ನಂತರ ಪ್ರಧಾನಿ ಮೋದಿಯವರ ಧ್ವನಿ ಆರಂಭವಾಗುತ್ತದೆ. ಈ ದೇಶ ಅಟಲ್ ಜೀಯವರ ಯೋಗದಾನ ಎಂದಿಗೂ ಮರೆಯಲ್ಲ. ಅವರ ನೇತೃತ್ವದಲ್ಲಿ ಪರಮಾಣು ಶಕ್ತಿಯಲ್ಲಿ ದೇಶ ಉಚ್ಛ ಸ್ಥಾನದಲ್ಲಿದೆ. ಪಕ್ಷದ ನಾಯಕ, ಸಂಸದ, ಮಂತ್ರಿ/ ಪ್ರಧಾನ ಮಂತ್ರಿ ಹೀಗೆ ಪ್ರತಿಯೊಂದು ವಿಷಯದಲ್ಲಿ ಅಟಲ್ ಜೀ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇಯ ಪುಣ್ಯಸ್ಮರಣೆ ದಿನವಾದ ಇಂದು ವಾಜಪೇಯಿಯ ಅವರ ಸಮಾಧಿ ಸ್ಥಳ ‘ಸೈದವ ಅಟಲ್’ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ