Kannada NewsKarnataka NewsLatest

ಬೆಳಗಾವಿಯಲ್ಲಿ ಎಟಿಎಂ ದೋಚಿ ಲಕ್ಷಾಂತರ ರೂ. ಕಳುವು

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – 

ಬೆಳಗಾವಿಯ ಹೊನಗಾ ಗ್ರಾಮದಲ್ಲಿ ಇಂಡಿಯಾ ಒನ್ ಎಟಿಎಂ ಒಡೆದು ಲಕ್ಷಾಂತರ ರೂ. ಕಳುವು ಮಾಡಲಾಗಿದೆ.

Home add -Advt

ಹೊನಗಾ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಟಿಎಂ ನಲ್ಲಿದ್ದ ಹಣದ ಪೆಟ್ಟಿಗೆ ಒಡೆಯಲಾಗಿದ್ದು 3.14 ಲಕ್ಷ ರೂ. ನಗದು ಕಳುವು ಮಾಡಲಾಗಿದೆ. ಆದರೆ ಎಟಿಎಂನಲ್ಲಿ ಬೀಗ ಮುರಿದ ಅಥವಾ ಪೆಟ್ಟಿಗೆ ಒಡೆದ ಕುರುಹುಗಳು ಲಭ್ಯವಾಗದ ಕಾರಣ ಯಾರೋ ಎಟಿಎಂಗೆ ಸಂಬಂಧಪಟ್ಟವರೇ ಕಳುವು ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಕೆಲ ಎಟಿಎಂಗಳಲ್ಲಿ ಸೆಕ್ಯುರಿಟಿ ವ್ಯವಸ್ಥೆ ಇಲ್ಲದಿರುವುದು ಕಳುವು ಮಾಡಲು ಆಸ್ಪದವಾಗುತ್ತಿದೆ. ಸಂಬಂಧಪಟ್ಟ ಪ್ರಾಧಿಕಾರ ಈ ಕುರಿತು ಗಮನ ಹರಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ದಿನಾಂಕ ಘೋಷಿಸಿದ ಬಸವರಾಜ ಬೊಮ್ಮಾಯಿ

Related Articles

Back to top button