Latest

64 ಲಕ್ಷ ಕದ್ದು ಪತ್ನಿ ಬಿಟ್ಟು, ಪ್ರೇಯಸಿಯೊಂದಿಗೆ ಎಸ್ಕೇಪ್; ಖತರ್ನಾಕ್ ಚಾಲಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೆ.3ರಂದು ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ ಹಣದೊಂದಿದೆ ಪರಾರಿಯಾಗಿದ್ದ ಚಾಲಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದು, ಹೆಂಡತಿ-ಮಕ್ಕಳಿದ್ದರೂ ಅತ್ತೆಯ ಮಗಳೊಂದಿಗಿನ ಡ್ರೈವರ್ ಪ್ರೇಮ್ ಕಹಾನಿ ಇದೀಗ ಬಹಿರಂಗವಾಗಿದೆ.

ಮಂಡ್ಯ ಮೂಲದ ಯೋಗೀಶ್ ಬಂಧಿತ ಆರೋಪಿ. ಕಳೆದ ನಾಲ್ಕು ವರ್ಷಗಳಿಂದ ಸೆಕ್ಯೂಲರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹೆಂಡತಿ ಹಾಗೂ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೂ ಗಂಡನಿಂದ ದೂರವಾಗಿದ್ದ ಅತ್ತೆಯ ಮಗಳ ಮೇಲೆ ಯೋಗೀಶ್ ಗೆ ಪ್ರೀತಿ.

ಫೆ.3ರಂದು ಆಕ್ಸಸ್ ಬ್ಯಾಂಕ್ ಗೆ ತುಂಬಲೆಂದು ಹಣ ತಂದಿದ್ದ ಯೋಗೀಶ್ ಹಣದ ಜೊತೆ ತನ್ನ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದಾನೆ. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button