Belagavi NewsBelgaum NewsKannada NewsKarnataka NewsNationalPolitics

*ಹಿರೇಬಾಗೇವಾಡಿ ಪೊಲೀಸ್‌ರಿಂದ ದಾಳಿ; ಗಾಂಜಾ ಮಾರಾಟಗಾರನ ಬಂಧನ*

ಪ್ರಗತಿವಾಹಿನಿ ಸುದ್ದಿ: ಸೆ. 9 ರಂದು ಹಲಗಾ ಗ್ರಾಮದ ಸರ್ವಿಸ್ ರಸ್ತೆ ಬಳಿ ಭರತೇಶ ಕಾಲೇಜ್ ಎಡಗಡೆ ಬರುವ ಈದ್ಗಾ ಕಡೆಗೆ ಸಾಗಿದ ಕಚ್ಚಾ ರಸ್ತೆಯಲ್ಲಿ  ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಹಾಗು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. 

ಪಿರಾಜಿ ಯಲ್ಲಪ್ಪ ಯೆಸೂಚೆ (31) ಬಂಧಿತ ಆರೋಪಿ. ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆತನ ಬಳಿ ಇದ್ದ ಸುಮಾರು ರೂ. 22,000 ಮೌಲ್ಯದ 509 ngo ಗ್ಯಾಂಜಾ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Home add -Advt

ಈ ದಾಳಿಯಲ್ಲಿ ಪಾಲ್ಗೊಂಡ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ಟಿ ಬಿ ನೀಲಗಾರ, ಹಾಗೂ ಸಿಬ್ಬಂದಿ ಅರುಣ ಕಾಂಬ್ಳೆ, ಬಾಳಪ್ಪ ಗುನ್ನಗೋಳ, ಮಹಾಂತೇಶ ಹೂಗಾರ, ಯಲ್ಲಾಲಿಂಗ ಮಾಳ್ಯಾಗೋಳ, ಯಲ್ಲಪ್ಪ ಮುನವಳ್ಳಿ, ರೇವಣಸಿದ್ದ ತಳೆವಾಡ ರವರ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.

Related Articles

Back to top button