ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಹೋಳಿ ಹಬ್ಬದ ಕಾರ್ಯಕ್ರಮವೊಂದರ ಮೇಲೆ ದಾಳಿ ನಡೆಸಿದ ಬಜರಂಗದಳದ ಆರು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮರೋಳಿಯಲ್ಲಿ ಹೋಳಿ ಹಬ್ಬದ ನಿಮಿತ್ತ ‘ರಂಗ್ ದೇ ಬರ್ಸಾ’ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂ ಹುಡುಗಿಯರೊಂದಿಗೆ ಇತರ ಸಮುದಾಯದ ಹುಡುಗರು ಸಹ ಭಾಗವಹಿಸಿದ್ದರು. ಇವರೆಲ್ಲ ಶುಲ್ಕ ಪಾವತಿ ಮಾಡಿ ಪ್ರವೇಶ ಪಡೆದು ಪರಸ್ಪರ ಬಣ್ಣ ಎರಚಿಕೊಂಡು ಡಿಜೆ ಸಂಗೀತಕ್ಕೆ ಕುಣಿಯುತ್ತಿದ್ದರು.
ಈ ಗದ್ದಲಕ್ಕೆ ಕೆಲವರು ಕಂಕನಾಡಿ ಠಾಣೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕ- ಯುವತಿಯರು ಮೈಮರೆತು ಅಶ್ಲೀಲವಾಗಿ ನರ್ತಿಸಿದ್ದಾರೆ ಎಂದು ಆರೋಪಿಸಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ನಡೆಯುವಲ್ಲಿ ನುಗ್ಗಿ ಅಲ್ಲಿ ಅಳವಡಿಸಿದ್ದ ಎಲ್ಲಾ ಉಪಕರಣಗಳು ಮತ್ತು ಡೆಕೊರೇಶನ್ ಗಳನ್ನು ಕಿತ್ತೆಸೆದರು.
ಮಧ್ಯ ಪ್ರವೇಶಿಸಿದ ಪೊಲೀಸರು ಬಜರಂಗದಳದ ಸದಸ್ಯರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ