ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ಮಟಕಾ ಆಡುವವರ ಹಾಗೂ ಕಳ್ಳಭಟ್ಟಿ ಮಾರಾಟದ ಮೇಲೆ ೪ ಪ್ರತ್ಯೇಕ ದಾಳಿ ನಡೆಸಿರುವ ಪೊಲೀಸರು ಒಟ್ಟು ೬ ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ ನಗರದ ಉದ್ಯಮಬಾಗ ಠಾಣೆ ಪಿಐ ದಯಾನಂದ ಶೇಗುಣ ಮತ್ತು ಅವರ ಸಿಬ್ಬಂದಿ ಓಸಿ/ಮಟಕಾ ಆಡುವವರ ಮೇಲೆ ದಾಳಿ ಕೈಗೊಂಡಿದ್ದು, ಉದ್ಯಮಬಾಗ ಠಾಣೆಯ ಮಜುಕರ ಕಂಪೌಂಡ್ ಹತ್ತಿರ ರಾಜು ಲೋಹಾರ (ಸಾ|| ಮಹಾವೀರ ಗಲ್ಲಿ, ಉದ್ಯಮಬಾಗ) ಮತ್ತು ಜ್ಯೋತಿಬಾ ಮಾನಗಾಂವಕರ (ಸಾ|| ಮಜಗಾವಿ) ಎಂಬ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ.೪೩೧೦ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ಠಾಣೆಯ ಪಿಐ ಸುನೀಲ ನಂದೇಶ್ವರ ಹಾಗೂ ಸಿಬ್ಬಂದಿ ಯಳ್ಳೂರ ಗ್ರಾಮದ ಚಾಂಗಳೇಶ್ವರ ಮಂದಿರ ಹತ್ತಿರ ಓಸಿ/ಮಟಕಾ ಆಡುತ್ತಿದ್ದ, ಮಯೂರ ಕದಮ(೨೬) (ಸಾ|| ಕಲ್ಮೇಶ್ವರ ಗಲ್ಲಿ, ಯಳ್ಳೂರ) ಈತನನ್ನು ವಶಕ್ಕೆ ಪಡೆದುಕೊಂಡು ಅವನಿಂದ ರೂ.೫೨೫೦/- ಹಣ ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಬೆನಕನಹಳ್ಳಿ ಗ್ರಾಮದ ಬಸ್ ಸ್ಟಾಂಡ ಹತ್ತಿರ ದಾಳಿ ಮಾಡಿ ಓಸಿ/ಮಟಕಾ ಆಟದಲ್ಲಿ ತೊಡಗಿದ್ದ ನಾಗೇಶ ದೇಸೂರಕರ ಹಾಗೂ ಶ್ರೀಕಾಂತ ಬೆನಕೆ (ಸಾ|| ಇಬ್ಬರೂ ಬೆನಕನ ಹಳ್ಳಿ) ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ.೪೭೫೦/- ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹೀಗೆ ಉದ್ಯಮಬಾಗ ಹಾಗೂ ಬೆಳಗಾವಿ ಗ್ರಾಮೀಣ ಪಿಐ ಮತ್ತು ಸಿಬ್ಬಂದಿಯವರಿಂದ ಒಟ್ಟು ೫ ಜನ ಆರೋಪಿತನ್ನು ಬಂಧಿಸಿ ಅವರಿಂದ ೧೪೩೧೦/- ಹಣ ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಉದ್ಯಮಬಾಗ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ ಮಾರುವವನನ್ನು ಬಂಧಿಸಿ, ೧೭ ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಲಾಗಿದೆ.
ಖಾನಾಪುರ ರಸ್ತೆಯ ಪಕ್ಕದ ವಿಶ್ವಾ ಸಿರಾಮಿಕ್ ಅಂಗಡಿಯ ಸಮೀಪ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಸಂತೋಷ ಪಾಟೀಲ(೪) (ಸಾ|| ಬ್ರಹ್ಮನಗರ ಉದ್ಯಮಬಾಗ) ಈತನ ಮೇಲೆ ಉದ್ಯಮಬಾಗ ಠಾಣೆಯ ಪಿಐ ದಯಾನಂದ ಶೇಗುಣಸಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆತನಿಂದ ೧೭ ಲೀಟರ್ ಕಳ್ಳಭಟ್ಟಿ ಸರಾಯಿ ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ