Kannada NewsKarnataka NewsLatest

ಕೊರೋನಾ ಸೋಂಕಿತರಿಗೆ ರಕ್ತದ ಕೊರತೆ: ಭಾನುವಾರ ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ವಿಶ್ವ ಹಿಂದೂ ಪರಿಷತ್ -ಬಜರಂಗದಳ  ವತಿಯಿಂದ ಭಾನುವಾರ ಬೆಳಗಾವಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಕೊರೋನಾ ಮಹಾಮಾರಿಯಿಂದ ರಕ್ತದ ಕೊರತೆಯಿಂದ ಬಳಲುವ ರೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿರುವ ಕಾರಣ ಎಲ್ಲೆಡೆ ರಕ್ತದ ಕೊರತೆ ಉಂಟಾಗುತ್ತಿದೆ.

Home add -Advt

ಅದನ್ನು ಮನಗಂಡು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ರಕ್ತದಾನ ಶಿಬಿರವನ್ನು  ರವಿವಾರ (ದಿನಾಂಕ 27/9/2020 ರಂದು)  ಆಯೋಜಿಸಿದೆ.

ರಾಮಜನ್ಮಭೂಮಿ ಆಂದೋಲನದಲ್ಲಿ ಕರಸೇವಕರಾಗಿ ಬಲದಾನಗೈದ, ಕೊಠಾರಿ ಬಂಧುಗಳ ಸವಿ ನೆನಪಿಗಾಗಿ  ಪ್ರತಿ ವರ್ಷ ನವೆಂಬರ್ 2ರಂದು  ಮಾಡುವ “ಬಲಿದಾನ ದಿವಸ ” ರಕ್ತದಾನ ಶಿಬಿರವನ್ನು ಈಗಿನ ಕೊರೋನಾ ತುರ್ತು ಸಂದರ್ಭದಲ್ಲಿ ಮಾಡಲು ನಿಶ್ಚಯಿಸಲಾಗಿದೆ.

ರಕ್ತದಾನ ಎಂದರೆ ಅದು ಜೀವದಾನ, ತುರ್ತುಪರಿಸ್ಥಿತಿಯಲ್ಲಿ  ಬದಕುಳಿಯಲು  ರಕ್ತವೇ ಆಧಾರ. ಆದ್ದರಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಸಭೆಯಲ್ಲಿ ಭಾಗಿಯಾಗಿ ಮತ್ತು ಭಾಗಿಯಾಗಲು ತಿಳಿಸಿ, ರಕ್ತದಾನ ಮಾಡಿ ಜೀವ ಉಳಿಸಿ.  ಹೆಚ್ಚೆಚ್ಚು ಜನರು ಈ  ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕೋರಲಾಗಿದೆ.

ಶಿಬಿರದ ಉದ್ಘಾಟನೆಯನ್ನು  ಶ್ರೀ ಚನ್ನಬಸವ ದೇವರು ( ರುದ್ರಸ್ವಾಮಿ ಮಠ ಬೀಳಕಿ ಅವರೊಳ್ಳಿ ) ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸುನಿಲ ಅಪ್ಟೇಕರ (ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು) ಮತ್ತು  ಕೃಷ್ಣ ಸಿದ್ದಪ್ಪ ಕುರುಬರ (ಸಮುದಾಯ ಸದಸ್ಯ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು) ಆಗಮಿಸುವರು.

ರವಿವಾರ  ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಶಾಸ್ತ್ರಿನಗರದ ಗುಜರಾತ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

 

Related Articles

Back to top button