
ಪ್ರಗತಿ ವಾಹಿನಿ ಸುದ್ದಿ, ಸಿದ್ದಾಪುರ:
ಅರಣ್ಯ ಅತಿಕ್ರಮಣ ತೆರವುಗೊಳಿಸಲು ಹೋದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಸಿದ್ದಾಪುರ ತಾಲೂಕಿನ ಬಾಳೆಕೈ ಗ್ರಾಮದ ಬಿಳೇಗೋಡಿನಲ್ಲಿ ನಡೆದಿದೆ.
ಬಾಳೇಗೋಡಿನ ಮಾಬ್ಲೇಶ್ವರ ಚಂದು ಮರಾಠಿ ಹಲ್ಲೆ ಮಾಡಿದ ಆರೋಪಿ. ಈತ ತನ್ನ ಜಮೀನಿನ ಪಕ್ಕದ ಅರಣ್ಯ ಇಲಾಖೆಯ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ರಾಜೇಶ ಗೌಡ, ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ನಾಯ್ಕ, ಗಾರ್ಡ್ಗಳಾದ ರೋಹಿತ್, ಮಣಿಕಂಠ ಮತ್ತು ವಾಚರ್ ಗೋಪಾಲ ನಾಯ್ಕ ಅವರ ಮೇಲೆ ಏಕಾಏಕಿ ಕತ್ತಿಯಿಂದ ದಾಳಿ ಮಾಡಿದ್ದಾನೆ. ಅರಣ್ಯಾಧಿಕಾರಿ ವಿಶ್ವನಾಥ ನಾಯ್ಕ ಮತ್ತು ಅರಣ್ಯ ರಕ್ಷಕ ರಾಜೇಶ ಗೌಡ ಅವರ ಕೈಗೆ ಗಂಭೀರ ಗಾಯವಾಗಿದೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಭೀಕರ ಅಪಘಾತ: ರತ್ನಾಗಿರಿ ಬಳಿ ಹೊತ್ತಿ ಉರಿದ 13 ಜನರಿದ್ದ ಬೆಳಗಾವಿ ಬಸ್
https://pragati.taskdun.com/terrible-accident-belgaum-bus-catches-fire-near-ratnagiri/