ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನೇ ಕೊಲ್ಲಲು ಯತ್ನ: ನಾಯಿ, ಬೆಕ್ಕು ಸಾವು, ಗಂಡ ಪ್ರಜ್ಞಾಹೀನ
ಪ್ರಗತಿವಾಹಿನಿ ಸುದ್ದಿ, ಸವದತ್ತಿ: ತಾಲೂಕಿ ಗೋರೇಬಾಳ ಎಂಬಲ್ಲಿ ಮಹಿಳೆಯೋರ್ವಳು ಉಪ್ಪಿಟ್ಟನಲ್ಲಿ ವಿಷ ಹಾಕಿ ಗಂಡನನ್ನೇ ಕೊಲೆಗೈಯ್ಯಲು ಯತ್ನಿಸಿದ್ದಾಳೆ.
ಉಪ್ಪಿಟ್ಟು ತಿಂದ ಪತಿ ನಿಂಗಪ್ಪ ಫಕೀರಪ್ಪ ಹಮಾನಿ (35) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾನೆ. ಆದರೆ, ಆತ ಬಿಟ್ಟಿದ್ದ ಉಪ್ಪಿಟ್ಟು ತಿಂದ ನಾಯಿ ಮತ್ತು ಬೆಕ್ಕು ಸಾವಿಗೀಡಾಗಿವೆ.
ನಿಂಗಪ್ಪನ ತಂದೆ ಫಕೀರಪ್ಪ ಯಲ್ಲಪ್ಪ ಹಮಾನಿ (ಪ್ರಾಯ: 68 ವರ್ಷ, ಆರ್/ಓ ಗೊರೇಬಾಳ ಗ್ರಾಮ( ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಾವಕ್ಕ w/o ನಿಂಗಪ್ಪ ಹಮಾನಿ, (ಪ್ರಾಯ: 32 ವರ್ಷ (ಸಂತ್ರಸ್ತರ ಪತ್ನಿ) ಮತ್ತು ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂದೋಗಿ ಸೇರಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಪತಿ ನಿಂಗಪ್ಪ ಪಕೀರಪ್ಪ ಹಮಾನಿ (ಪ್ರಾಯ: 35 ವರ್ಷ ಆರ್/ಓ ಗೊರೇಬಾಳ ಗ್ರಾಮ)ಯ 2 ಎಕರೆ ಜಮೀನು ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಸಹೋದರ ಪ್ರಚೋದನೆಯಿಂದ ಸಾವಕ್ಕ ಈ ಕೃತ್ಯ ಎಸಗಿದ್ದಾಳೆ. ಗಂಡನನ್ನು ಕೊಲ್ಲಲೆಂದೇ ವಿಷ ಸೇರಿಸಿ ಉಪ್ಪಿಟ್ಟು ತಯಾರಿಸಿದ್ದಾಳೆ. ಆಗಸ್ಟ್ 11 ರಂದು ಈ ಕೃತ್ಯ ನಡೆದಿದೆ.
ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ