Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಘೋರ ಕೃತ್ಯ: ಯುವಕನ ರುಂಡ ಕತ್ತರಿಸಿ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುವಕನೊಬ್ಬನ ರುಂಡವಿಲ್ಲದ ದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

Home add -Advt

ಯುವಕನ ರುಂಡವನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ದುಷ್ಕರ್ಮಿಗಳು. ಹಾರೂಗೇರಿಯ ನಿವಾಸಿ ಅಕ್ಬರ್ ಶಬ್ಬೀರ್ ಜಮಾದಾರ (22) ಕೊಲೆಯಾದ ಯುವಕ.

ಯುವಕನ ರುಂಡ-ಮುಂಡ ಬೇರೆ ಬೇರೆ ಪ್ರದೇಶಗಳಲ್ಲಿ ಪತ್ತೆಯಾಗಿದ್ದು, ಅರಣ್ಯ ಭಾಗಕ್ಕೆ ಹೋದ ಜನರು ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಾರೂಗೇರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ಮಾಡಿದ್ದು, ಓರ್ವ ಆರೊಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಾಂತೇಶ ಪೂಜಾರಿ (24) ಆರೋಪಿ.

ಮೊದಲು ಬಾಟಲಿಯಿಂದ ತಲೆಗೆ ಹೊಡೆದು ನಂತರ ಕುಡಗೋಲಿನಿಂದ ರುಂಡ ಕತ್ತರಿಸಲಾಗಿದೆ.

ಇಬ್ಬರೂ ಸ್ನೇಹಿತರಾಗಿದ್ದು, ಹಣದ ವ್ಯವಹಾರ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.

ವಿವರ:

ಆರೋಪಿ ಮಹಾಂತೇಶ ಸೋಮನಿಂಗ ಪೂಜಾರಿ ಸಾ!!ಬಡಬ್ಯಾಕೂಡ ತಾ!!ರಾಯಬಾಗ ಈತನು ಫಿರ್ಯಾದಿ ಮಗ ಮೃತ ಅಕ್ಬರ ಶಬ್ಬಿರ ಜಮಾದಾರ ವಯಸ್ಸು 22 ವರ್ಷ, ಜಾತಿ ಮುಸ್ಲಿಂ. ಉದ್ಯೋಗ ಡ್ರೈವರ ಕೆಲಸ, ಸಾ!!ಹಾರೂಗೇರಿ ತಾ|ರಾಯಬಾಗ, ಈತನಿಗೆ ಕೈಗಡ ಕೊಟ್ಟ ಹಣ ಮತ್ತು ಮೊಬೈಲ್ ಮರಳಿ ಕೊಡಲು ಒತ್ತಾಯ ಮಾಡಿದ್ದರಿಂದ ಮೃತನು ಮರಳಿ ಆರೋಪಿತನಿಗೆ ಹಣ ಮತ್ತು ಮೊಬೈಲ್ ಕೊಡದ್ದರಿಂದ ಸಿಟ್ಟಾಗಿ ಆರೋಪಿತನು ಮತ್ತು ಆತನ ಸಂಗಡಿಗರು ಕೂಡಿ ಕೊಲೆ ಮಾಡುವ ಉದ್ದೇಶದಿಂದ ಬಸ್ತವಾಡ ಗ್ರಾಮ ಹದ್ದಿಯ ಬಸ್ತವಾಡ-ಬರನಾಳ ರಸ್ತೆಯ ಪಕ್ಕದ ಜಂಗಲ್ ದಲ್ಲಿ ಕರೆದುಕೊಂಡು ಹೋಗಿ ದಿನಾಂಕ 17/08/2023 ರಂದು 22.30 ಗಂಟೆ ಸುಮಾರಿಗೆ ಆರೋಪಿತನು ತನ್ನ ಸಂಗಡಿಗರೊಂದಿಗೆ ಹರಿತವಾದ ಆಯುದದಿಂದ ಕುತ್ತಿಗೆ ಕಡೆದು ರುಂಡ ಬೇರ್ಪಡಿಸಿ ಕೊಲೆ ಮಾಡಿ ಆತನ ಶವ ಗುರುತು ಸಿಗದ ಹಾಗೆ ಮತ್ತು ಸಾಕ್ಷಿ ಪುರಾವೆ ನಾಶ ಮಾಡುವ ಉದ್ದೇಶದಿಂದ ಮೃತನ ರುಂಡವನ್ನು ಒಗೆದು ಸಾಕ್ಷಿ ನಾಶಪಡಿಸಿದ್ದಾನೆ. ಹಾರೂಗೇರಿ


Related Articles

Back to top button