*ಚಿನ್ನದ ಅಂಗಡಿ ದೋಚಲು ಯತ್ನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಂಡವಾಡ ಗ್ರಾಮದ ನಾರಾಯಣ ಪೋತದಾರ ಎಂಬುವರಿಗೆ ಸೇರಿದ್ದ ಅಂಗಡಿಯಲ್ಲಿ ಕಳ್ಳತನದ ವಿಫಲ ಯತ್ನ ನಡೆದಿದೆ. ರಾತ್ರಿ 2ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನ ಮೇಲೆ ಬಂದ ಮೂವರು ಮುಸುಕು ದಾರಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದಿರುವ ದರೋಡೆಕೋರರು ಮೊದಲಿಗೆ ಅಂಗಡಿ ಮುಂಭಾಗದಲ್ಲಿ ಹಾಕಿದ್ದ ಸಿಸಿ ಕ್ಯಾಮೆರಾವನ್ನು ಹಾನಿ ಮಾಡಿದ್ದಾರೆ.
ಬಳಿಕ ಬಾಗಿಲು ಮುರಿದು ಒಳಗೆ ನುಗ್ಗಿದ ವ್ಯಕ್ತಿಯೋರ್ವ ಕೆಲ ಸಮಯ ಹುಡುಕಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಇದೇ ಸಮಯಕ್ಕೆ ಎಚ್ಚರಗೊಂಡಿದ್ದ ಮಹಿಳೆಯೋರ್ವಳು ಶಬ್ದ ಕೇಳಿ ಜೋರಾಗಿ ಕಿರುಚಾಡಿದ್ದರಿಂದ ಮನೆಯವರು ಎಚ್ಚರಗೊಂಡಿದ್ದಾರೆ. ತಕ್ಷಣ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವುದರ ಜೊತೆಗೆ ದರೋಡೆಕೋರರ ಬಂಧನಕ್ಕೆ ಆಗ್ರಹಿಸಿದ್ದಾರೆ.