Belagavi NewsBelgaum NewsKannada NewsKarnataka NewsNationalPolitics

*ಕಾರ್ಖಾನೆಯ ಪುನಶ್ಚೇತನ ನಮ್ಮ ಉದ್ಧೇಶ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಂದು ಕುಕಡೊಳ್ಳಿ, ಗೆಜಪತಿ ಗ್ರಾಮಗಳಲ್ಲಿ ಪ್ಯಾನಲ್ ನ ಸರ್ವ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.

 ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ನ್ನು ಬೆಂಬಲಿಸುವಂತೆ ಕಾರ್ಖಾನೆಯ ಷೇರುದಾರರಲ್ಲಿ ವಿನಂತಿಸಿದರು.

Home add -Advt

ಕಾರ್ಖಾನೆಯ ಪುನಶ್ಚೇತನ ನಮ್ಮ ಮೊದಲ ಆದ್ಯತೆ. ರೈತರು, ಕಾರ್ಮಿಕರ ಹಿತ ಕಾಯುತ್ತೇವೆ ಎಂದು ಅವರು ಭರವಸೆ ನೀಡಿದರು.

ಈ ವೇಳೆ ಪಾಟೀಲ ರಾಮನಗೌಡ ಸಣಗೌಡ, ಪಾಟೀಲ ರಾಘು ಚಂದ್ರಶೇಖರ್, ಭರಮಪ್ಪ ಕಲ್ಲಪ್ಪ ಶೀಗಿಹಳ್ಳಿ, ಅಡಿವೇಶ್ ಇಟಗಿ, ನಿಂಗಪ್ಪ ತಳವಾರ, ರಮೇಶ ಮರಕಟ್ಟಿ, ಮಂಜು ಹುಬ್ಬಳ್ಳಿ, ಪರ್ವತಗೌಡ ಪಾಟೀಲ ಆಯಾ ಗ್ರಾಮಗಳ ಷೇರುದಾರರು, ಮುಖಂಡರು  ಉಪಸ್ಥಿತರಿದ್ದರು.

Related Articles

Back to top button