ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶಂಸುದ್ದೀನ್ ಚೌಧರಿ ಮಾಣಿಕ್ ಅವರನ್ನು ಭಾರತದ ಈಶಾನ್ಯ ಗಡಿಯಲ್ಲಿರುವ ಸಿಲ್ಲೆಟ್‌ನಲ್ಲಿ ಬಂಧಿಸಲಾಗಿದೆ ತಿಳಿದು ಬಂದಿದೆ.
ಅವಾಮಿ ಲೀಗ್ ನಾಯಕ ಎಎಸ್‌ಎಂ ಫಿರೋಜ್ ಅವರನ್ನು ಅವರ ನಿವಾಸದಿಂದ ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಂಧಿತ ಮಾಣಿಕ್ ಅವರನ್ನು ಮಧ್ಯರಾತ್ರಿಯವರೆಗೆ ಬಿಜಿಬಿ ಹೊರಠಾಣೆಯಲ್ಲಿ ಇರಿಸಲಾಗಿತ್ತು.
ಶೇಖ್ ಹಸೀನಾ ಅವರ ಸರ್ಕಾರವು ಪತನಗೊಂಡ ನಂತರ ಬಾಂಗ್ಲಾದೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.
ಹಸೀನಾ ದೇಶ ತೊರೆದ ಬಳಿಕ ಹಿರಿಯ ಮಂತ್ರಿಗಳು ಸೇರಿದಂತೆ ಪದಚ್ಯುತ ಆಡಳಿತದ ಹಲವು ನಾಯಕರನ್ನು ಬಂಧಿಸಲಾಗಿದೆ. ಮಾಜಿ ಕಾನೂನು ಸಚಿವ ಅನಿಸುಲ್ ಹಕ್ ಮತ್ತು ಮಾಜಿ ಪ್ರಧಾನಿಯವರ ಖಾಸಗಿ ವಲಯದ ವ್ಯವಹಾರಗಳ ಸಲಹೆಗಾರ ಸಲ್ಮಾನ್ ಎಫ್ ರೆಹಮಾನ್ ಅವರನ್ನು ಢಾಕಾದ ಬಂದರು ಸದರ್‌ಘಾಟ್ ಟರ್ಮಿನಲ್ ಪ್ರದೇಶದಿಂದ ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ