ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಮ್ಮ ಮನೆಯ ಆಸುಪಾಸಿನಲ್ಲಿ ಯಾರಾದರೂ ಅಥವಾ ಸಂಬಂಧಿಕರು ಅಥವಾ ಪರಿಚಯಸ್ಥರು ಯಾವುದೇ ರೋಗದ ದಿಂದ ಮರಣ ಹೊಂದಿದಲ್ಲಿ ಒಮ್ಮೆ ಅವರ ಪಾಸ್ ಬುಕ್ ಪರಿಶೀಲಿಸಲು ಹೇಳಿ.
ಒಂದು ವೇಳೆ 1 ಏಪ್ರಿಲ್ 2020 ರಿಂದ 31 ಮಾರ್ಚ್ 2021 ರವರೆಗೆ ಬ್ಯಾಂಕಿನವರು 12/- ರೂ ಅಥವಾ 330/- ರೂ ಕಡಿತ ಮಾಡಿದ್ದರೆ, ಪಾಸ್ ಬುಕ್ಕಿನ ಎಂಟ್ರಿ ಮಾಡಿಸಿ ಒಂದು ಪ್ರಿಂಟ್ ತೆಗೆಯಲು ಹೇಳಿ. ಮೃತವ್ಯಕ್ತಿಯ ಮನೆಯವರಿಗೆ ಆ ದಾಖಲೆಯನ್ನು ಬ್ಯಾಂಕಿನವರಿಗೆ ತೋರಿಸಿ 2 ಲಕ್ಷ ವಿಮೆಯ ಹಣವನ್ನು ನೀಡಲು ಹೇಳಿ. ಇದನ್ನು ಮರಣಹೊಂದಿದ 90 ದಿನಗಳ ಒಳಗೆ ಹಣವನ್ನು ವಿಮೆ ಮಾಡಿಸಿದ ಬ್ಯಾಂಕಿನವರ ಹತ್ತಿರ ಕೇಳಿ ಪಡೆಯಿರಿ ಹಾಗೂ ಇತರರಿಗೂ ತಿಳಿಸಲು ಹೇಳಿ .
ಭಾರತ ಸರಕಾರವು 2015ರಿಂದ ಹೆಚ್ಚಿನ ಬಡಜನರ ಉಳಿತಾಯ ಖಾತೆಯಿಂದ 2 ಅಗ್ಗದ ವಿಮೆ ಪಾಲಿಸಿಯನ್ನು ಮಾಡಿಸಿದೆ.
1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ.
2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.
ಬ್ಯಾಂಕಿನವರು ಹೆಚ್ಚಿನ ಮಧ್ಯಮವರ್ಗದ ಜನರಿಂದ ಫಾರ್ಮನ್ನು ಭರ್ತಿ ಮಾಡಿಸಿ ವರ್ಷಂಪ್ರತಿ ಈ ಎರಡು ವಿಮೆಯ ಪಾಲಿಸಿಯ ಕಂತನ್ನು ಅವರ ಖಾತೆಯಿಂದ ತೆಗೆದಿರುತ್ತಾರೆ.
ಹಾಗಾಗಿ ಇದನ್ನು ಆದಷ್ಟು ಶೇರ್ ಮಾಡಿ ಜನರಿಗೆ ಇದರ ಬಗ್ಗೆ ಮಾಹಿತಿಯನ್ನು ಹಂಚಿ ಜನರಿಗೆ ಅವರು ಕಟ್ಟಿಕೊಂಡು ಬಂದ ವಿಮೆಯ ಬಾಬ್ತು ರೂಪಾಯಿ ಎರಡು ಲಕ್ಷ ಸಿಗುವ ಹಾಗೆ ಮಾಡಿ ಸಾರ್ವಜನಿಕರಿಗೆ ಸಹಾಯ ಮಾಡಿ.
(ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ. ಹೆಚ್ಚು ಜನರಿಗೆ ಸೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ