Latest

ಸಚಿವ ಸಿ.ಟಿ.ರವಿ ರಾಜಿನಾಮೆ ರಾಜ್ಯೋತ್ಸವದ ನಂತರ ಅಂಗೀಕಾರ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಶನಿವಾರ ಸಲ್ಲಿಸಿರುವ   ರಾಜಿನಾಮೆಯನ್ನು ಕನ್ನಡ ರಾಜ್ಯೋತ್ಸವದ ನಂತರ ಸ್ವೀಕರಿಸುವ ಸಾಧ್ಯತೆ ಇದೆ.

ಶನಿವಾರ ತಮ್ಮ ಸಾಧನೆಯ ವಿವರವನ್ನು ಹೊತ್ತ ಕಿರುಹೊತ್ತಿಗೆ ಜೊತೆಗೆ ತಮ್ಮ ರಾಜಿನಾಮೆ ಪತ್ರವನ್ನೂ ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ರವಿ, ಒಂದು ವ್ಯಕ್ತಿಗೆ ಒಂದೇ ಹುದ್ದೆ ತತ್ವದ ಅಡಿ ಅವರು ರಾಜಿನಾಮೆ ಸಲ್ಲಿಸಿದ್ದಾರೆ.

ಇದೇ 5, 6ರಂದು ಪಕ್ಷದ ರಾಷ್ಟ್ರೀಯ ಸಂಘಟನಾ ಸಭೆ ನಡೆಯಲಿದ್ದು, ಅಲ್ಲಿ ರವಿ ಪಾಲ್ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ವರಿಷ್ಠರು ಈ ಬೆಳವಣಿಗೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ತಮ್ಮ ರಾಜಿನಾಮೆ ವಿಷಯವನ್ನು ರವಿ ಈಗಾಗಲೆ  ವರಿಷ್ಠರಿಗೆ ತಿಳಿಸಿದ್ದಾರೆ.

ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಂತರವಷ್ಟೆ ಅವರ ರಾಜಿನಾಮೆ ಅಂಗೀಕಾರವಾಗುವ ಸಾಧ್ಯತೆ ಇದೆ.

Home add -Advt

ಸಿ.ಟಿ ರವಿ ರಾಜೀನಾಮೆ ಕೊಡ್ತಾರೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಸಚಿವ ಸ್ಥಾನ ತ್ಯಾಗ ಮಾಡ್ತಾರಾ ಸಿ.ಟಿ.ರವಿ?

ಸಿಎಂಗೆ ಟಾಂಗ್ ನೀಡಿದ ಸಿ.ಟಿ ರವಿ

Related Articles

Back to top button