Belagavi NewsBelgaum NewsKannada NewsKarnataka NewsNationalPolitics

*ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ, ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ  ಧೂಧಗಂಗಾ ನದಿ ತೀರಕ್ಕೆ ಮಂಗಳವಾರ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಸೇತುವೆ ಹಾಗೂ ನೀರಿನ ಮಟ್ಟವನ್ನು ಪರಿಶೀಲನೆ ನಡೆಸಿದರು.‌

ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಇನ್ನು ಹೆಚ್ಚುವ ಸಾಧ್ಯತೆ ಇದೆ. ಪ್ರವಾಹದ ಮುನ್ನಚ್ಚರಿಕೆಯ ಕಾರಣ ನದಿಯ ತೀರದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಬೇಕು. ನದಿ ತೀರದ ಜನರು ಭಯಪಡಬೇಡ ಎಂದು ಸ್ಥಳೀಯರಿಗೆ ಧೈರ್ಯ ತುಂಬಲಾಯಿತು.

ಈ ಸಂದರ್ಭದಲ್ಲಿ ದರೆಪ್ಪ ಹವಾಲ್ದಾರ, ಅಭಿನಂದನ ಪಾಟೀಲ, ಪ್ರಶಾಂತ ಕರಂಗಳೆ, ಸಂಜಯ ಪಾಟೀಲ, ರಾಜು  ಅಮೃತಸಮ್ಮನ್ನವರ, ಚಿದಾನಂದ ಕಮತೆ, ಚಿದಾನಂದ ಸಮಗಾರ, ಶೀರಿಷ ಅಡಕೆ, ಸುಭಾಷ ಕಮತೆ, ನಾರಾಯಣ ವಾಳಕೆ, ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Home add -Advt

Related Articles

Back to top button