Latest

ವಿಧಾನಸೌಧದಲ್ಲಿ ಸಿಎಂ ಭೇಟಿಯಾದ ನಾಗೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದರು.

ಸಂಪುಟ ಸಭೆಗೂ ಮುನ್ನ ನಾಗೇಂದ್ರ ಸಿಎಂ ಭೇಟಿಯಾಗಿ 10 ನಿಮಿಷ ಮಾತುಕತೆ ನಡೆಸಿದರು.

ಸಂಪುಟ ಸಭೆ ಮುಗಿದ ಬಳಿಕ ಮತ್ತೆ ಮಾತನಾಡೋಣ, ನೀವು ಇಲ್ಲಿಯೇ ಇರಿ ಎಂದು ಸಿಎಂ ಸಭೆಗೆ ತೆರಳಿದರು.

ರಮೇಶ್ ಜಾರಕಿಹೊಳಿ ಜೊತೆ ಇರುವ ಒಬ್ಬೊಬ್ಬ ಶಾಸಕರನ್ನಾಗಿ ಕರೆದು ಕುಮಾರಸ್ವಾಮಿ ಮಾತನಾಡಿಸುತ್ತಿದ್ದಾರೆ.

ಹಿಂದೆ ಮಹೇಶ್ ಕುಮಟಳ್ಳಿ ಮನವೊಲಿಸಿದ್ದರು. ಶ್ರೀಮಂತಪಾಟೀಲ್, ನಂತರ ಬಿ.ವಿ.ನಾಯಕ್ ಜೊತೆಯೂ ಮಾತುಕತೆ ನಡೆಸಿದ್ದರು.

ಇದರಿಂದಾಗಿ, ರಮೇಶ ಜಾರಕಿಹೊಳಿ ಏಕಾಂಗಿಯಾಗುತ್ತಿರುವ ಅನುಮಾನ ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button