Latest

ಕಿಂಗ್ ಆಫ್ ಸ್ಪೈಸಸ್ ಖ್ಯಾತಿಯ ಧರಮ್ ಪಾಲ್ ಗುಲಾಟಿ ವಿಧಿವಶ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಜನಪ್ರಿಯ ಮಸಾಲಾ ಸಂಸ್ಥೆ ಎಂಡಿಹೆಚ್ ಸಂಸ್ಥೆ ಮಾಲೀಕ ಧರಮ್ ಪಾಲ್ ಗುಲಾಟಿ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಸ್ವದೇಶಿ ಉತ್ಪನ್ನವನ್ನು ಜಾಗತಿಕ ಬ್ರ್ಯಾಂಡ್ ಆಗಿ ಧರ್ಮಪಾಲ್ ಗುಲಾಟಿ ಪರಿಚಯಿಸಿದ್ದರು. ಕಿಂಗ್ ಆಫ್ ಸ್ಪೈಸಸ್ ಎಂದೇ ಖ್ಯಾತರಾಗಿದ್ದ ಗುಲಾಟಿ, ಕೆಲ ವಾರಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ದೆಹಲಿಯ ಮಾತಾ ಚಾನಲ್ ದೇವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಧರಮ್ ಪಾಲ್ 1923ರಲ್ಲಿ ಪಕೈಸ್ತಾನದ ಸಿಯಾಲ್ ಕೋಟ್ ನಲ್ಲಿ ಜನಿಸಿದ್ದರು. ತಮ್ಮ ತಂದೆ ನಡೆಸುತ್ತಿದ್ದ ಮಸಾಲೆ ವ್ಯಾಪಾರಕ್ಕೆ ಕೈ ಜೋಡಿಸಿದ್ದರು. ಪಾಕ್ ವಿಭಜನೆ ಬಳಿಕ ದೆಹಲಿಗೆ ಬಂದು ನೆಲೆಸಿದ್ದ ಧರಮ್ ಪಾಲ್, ಪ್ರಮುಖ ಮಸಾಲೆ ಉತ್ಪನ್ನದ ಸಂಸ್ಥೆ ಎಂಡಿಹೆಚ್ ನ್ನು ಕಟ್ಟಿ ಬೆಳೆಸಿದ್ದರು.

Home add -Advt

Related Articles

Back to top button