-
Belagavi News
*ಅಂಗನವಾಡಿ ಕಾರ್ಯಕರ್ತೆಯರ ಕಡೆ ಕೇಂದ್ರ ಸರಕಾರವೂ ಕಣ್ತೆರೆಯಲಿ: ಲಕ್ಷ್ಮೀ ಹೆಬ್ಬಾಳಕರ್ ಆಗ್ರಹ*
*ಅಂಗನವಾಡಿ ಕಾರ್ಯಕರ್ತೆಯರಿಗೆ ಅತಿಹೆಚ್ಚು ಸಂಭಾವನೆ ಕೊಡುವ ರಾಜ್ಯ ಕರ್ನಾಟಕ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್* * *ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆಗೆ ಸಚಿವರ ಉತ್ತರ* ಪ್ರಗತಿವಾಹಿನಿ ಸುದ್ದಿ, *ವಿಧಾನಸಭೆ (ಬೆಂಗಳೂರು):* ಅಂಗನವಾಡಿ…
Read More » -
Belagavi News
*ಸಾಂಬ್ರಾ ಗ್ರಾಮದಲ್ಲಿ ನೂತನ ಬೀದಿ ದೀಪ ಹಾಗೂ ನಾಮಫಲಕ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ ಸಾಂಬ್ರಾ ಗ್ರಾಮದಲ್ಲಿ ನೂತನವಾಗಿ ಅಳವಡಿಸಲಾಗಿರುವ ಬೀದಿ ದೀಪಗಳು ಹಾಗೂ “ಐ ಲವ್ ಸಾಂಬ್ರಾ” ಎನ್ನುವ ನಾಮಫಲಕವನ್ನು ಮಹಿಳಾ…
Read More » -
Education
*ಕಾನೂನುವ್ಯಾಸಂಗಕ್ಕೆಅಣಕುನ್ಯಾಯಾಲಯಸ್ಪರ್ಧೆಅಡಿಪಾಯ : ಜ್ಯೋತಿ ಎಂ.*
ಬೆಳಗಾವಿ ಆರ್.ಎಲ್.ಕಾನೂನು ಮಹಾವಿದ್ಯಾಲಯದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯಾರ್ಥಿಗಳಿಗೆ ಅಣಕು ನ್ಯಾಯಾಲಯ ಸ್ಪರ್ಧೆ ಶೈಕ್ಷಣಿಕ ಚಟುವಟಿಕೆಗಿಂತ ಹೆಚ್ಚಿನದ್ದಾಗಿದೆ. ಇದು ಕಾನೂನು ಶಿಕ್ಷಣಕ್ಕೆ ಅಡಿಪಾಯವಾಗಿದೆ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಎಂ.ಹೇಳಿದರು. ಶುಕ್ರವಾರ ನಗರದ ಕೆಎಲ್ ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 16 ನೇ ಎಂ.ಕೆ.ನಂಬಿಯಾರ್ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಅಣಕು ನ್ಯಾಯಾಲಯ ಸ್ಪರ್ಧೆ ಕೇವಲ ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಭವಿಷ್ಯದ ಜೀವನಕ್ಕೂ ಅತ್ಯಂತ ಮಹತ್ವದಾಗಿದೆ. ವಾದವು ಚಿಕ್ಕದಾಗಿರಬೇಕು, ಸಂಕ್ಷಿಪ್ತವಾಗಿರಬೇಕು. ಕೆಲವೇ ಪದಗಳಲ್ಲಿ ಹೇಳಬೇಕು ಮತ್ತು ಸಂಕೀರ್ಣ ಸಮಸ್ಯೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇರಬೇಕು ಎಂದು ಅವರು ಸಲಹೆ ನೀಡಿದರು. ನ್ಯಾಯಾಲಯದ ಶಿಷ್ಟಾಚಾರಗಳು, ಪೀಠದ ಮೇಲಿನ ಗೌರವವೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ನ್ಯಾಯವಾದಿ ಮತ್ತು ಕೆಎಲ್ಎಸ್ ಸೊಸೈಟಿ ಕಾರ್ಯದರ್ಶಿ ಎಸ್.ವಿ.ಗಣಾಚಾರಿ ಮಾತನಾಡಿ, ಅಣಕು ನ್ಯಾಯಾಲಯ ಸ್ಪರ್ಧೆ ಕಾನೂನು ಶಿಕ್ಷಣದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಏಕೆಂದರೆ ಪಠ್ಯ ಪುಸ್ತಕವು ನಮಗೆ ಸೈದ್ಧಾಂತಿಕ ವಿಷಯವನ್ನು ಮಾತ್ರ ಕಲಿಸುತ್ತದೆ. ಅದರೆ, ಅಣಕು ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣದ ಪ್ರಾಯೋಗಿಕ ಶಿಕ್ಷಣವನ್ನು ಅಭ್ಯಾಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿಗಳು ಸಂಶೋಧನೆ, ವಕಾಲತ್ತು, ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್ಎಸ್ ಸೊಸೈಟಿ ಅಧ್ಯಕ್ಷ ಪ್ರದೀಪ್ ಎಸ್. ಸಾವ್ಕರ್ ಮಾತನಾಡಿ, ವಿದ್ಯಾರ್ಥಿಯ ವೃತ್ತಿಜೀವನದಲ್ಲಿ ವಾದ ಮಂಡನೆ ಬಹಳ ಮುಖ್ಯ. ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭಾಗವಹಿಸುವುದು, ಜತೆಗೆ ಇಂಟರ್ನ್‌ಶಿಪ್ ಕಾನೂನು ವಿದ್ಯಾರ್ಥಿಗಳಿಗೆ ದೀರ್ಘಾವಧಿಯಲ್ಲಿ ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳನ್ನು ಓದಲು, ಸಂಶೋಧನೆ ಮಾಡಲು ಮತ್ತು ಕೆಲಸ ಮಾಡಲು ಪ್ರೇರಣೆ ಉಂಟುಮಾಡುತ್ತದೆ. ವಿದ್ಯಾರ್ಥಿಗಳು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ಉಪಯುಕ್ತವಾಗುತ್ತದೆ ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಆರ್.ಎಸ್. ಮುತಾಲಿಕ್ ಅವರು ಕಾಲೇಜಿನ ಪರಂಪರೆ ಮತ್ತು ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ವಿವರಿಸಿದರು.ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಹಾಗೂ ಪ್ರಾಧ್ಯಾಪಕಿ ಪ್ರೊ.ಅಶ್ವಿನಿ ಪರಬ್ ಅವರು ಸ್ಪರ್ಧೆಯ ನಿಯಮದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ವಿಜೇತರಿಗೆ ರೂ.50,000 ನಗದು ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ಟ್ರೋಫಿ ಮತ್ತು ರೂ.30,000 ನಗದು ಬಹುಮಾನ, ಅತ್ಯುತ್ತಮ ಪುರುಷ ಸ್ಪರ್ಧಿಗೆ ರೂ. 15,000 ರೂಪಾಯಿ ನಗದು, ಅತ್ಯುತ್ತಮ ಮಹಿಳಾ ಸ್ಪರ್ಧಿಗೆ ರೂ.15,000 ರೂಪಾಯಿ ನಗದು, ಅತ್ಯುತ್ತಮ ಸ್ಮಾರಕ ಪ್ರಶಸ್ತಿ ಅಥವಾ ರೂ.15,000 ರೂಪಾಯಿ ನಗದು, ಮತ್ತು ಅತ್ಯುತ್ತಮ ಸಂಶೋಧಕರಿಗೆ ರೂ.10,000 ರೂಪಾಯಿ ನಗದು ಮತ್ತು ಅತ್ಯುತ್ತಮ ಸ್ಪರ್ಧಿಗೆ ಅಶೋಕ್ ಎನ್ ಪೋತದಾರ ಹೆಸರಿನ ಬೆಸ್ಟ್ ಮೂಟರ್ ಸ್ಪರ್ಧಿಗೆ ರೂ. 6,050 ನಗದು ಬಹುಮಾನ ನೀಡಲಾಗುತ್ತದೆ. ಈ ಸಮಾರಂಭವನ್ನು ಕಾಲೇಜಿನ ಮೂಟ್ ಕೋರ್ಟ್ ವಿಭಾಗ ಆಯೋಜಿಸಿತ್ತು. ಕೆಎಲ್ಎಸ್ ಸೊಸೈಟಿ ಚೇರ್ಮನ್ ಹಾಗೂ ನ್ಯಾಯವಾದಿ ಎ.ಕೆ.ಟಗಾರೆ, ಕಾರ್ಯದರ್ಶಿ ವಿ.ಎಂ. ದೇಶಪಾಂಡೆ, ಪ್ರಾಚಾರ್ಯ ಡಾ. ಎ.ಎಚ್.ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಸುನಿಧಿ ಜೋಶಿ, ಕಾಲೇಜಿನ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ತನ್ಮಯಿ ಸರಾಫ್ ಮತ್ತು ಮಹಿಳಾ ಪ್ರತಿನಿಧಿ ಚಂದ್ರಲೇಖಾ ಪಾಟೀಲ, ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. Belagavi: Inauguration of the…
Read More » -
Belagavi News
KLS GIT ವಿದ್ಯಾರ್ಥಿಗಳ ಅದ್ಭುತ ಸಾಧನೆ
ರಾಷ್ಟ್ರ ಮಟ್ಟದ ಮಣಿಪಾಲ್ ರೆವೆಲ್ಸ್ ಕಪ್ 2026 ಮತ್ತು ರಾಜ್ಯ ಮಟ್ಟದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ KLS GIT ವಿದ್ಯಾರ್ಥಿಗಳ ಅದ್ಭುತ ಸಾಧನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ…
Read More » -
Belagavi News
*ಬೆಳಗಾವಿ ಬಳಿ ಭೀಕರ ಅಪಘಾತ: ರಾಜುಗೌಡ ಪಾಟೀಲ ಸಾವು*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರೇಬಾಗೇವಾಡಿ ಸಮೀಪ ರಾಷ್ಟ್ರೀಯ…
Read More » -
Belagavi News
*ಒಂದೇ ವರ್ಷದಲ್ಲಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಇದೇ ತಿಂಗಳು ದಾಖಲಾಗಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಬೆಳಗಾವಿಯ ವಿಶೇಷ ಪೊಕ್ಸೋ ನ್ಯಾಯಾಲಯ ಪ್ರಕರಣ…
Read More » -
Latest
*ಬೆಳಗಾವಿಯಲ್ಲಿ “ಕಲಾ ಸಂತೆ” ಜನಪದ ಜಾತ್ರೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿಯಲ್ಲಿ ವಿಶಿಷ್ಟವಾದ “ಕಲಾ ಸಂತೆ – 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪದ ಸಂಸ್ಕೃತಿ, ಕಲೆ ಮತ್ತು ಮಹಿಳಾ ಉದ್ಯಮಿತ್ವವನ್ನು…
Read More » -
Belagavi News
*ನಾಗೇನಹಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ; ಜ್ಞಾನೇಶ್ವರಿ ಸೋಹಳಾ ಪಾರಾಯಣ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ನಾಗೇನಹಟ್ಟಿ ಗ್ರಾಮದಲ್ಲಿ ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ರಸ್ತೆ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಯುವ…
Read More » -
Belagavi News
*ಗುರು ಭವನ ಲೋಕಾರ್ಪಣೆ*
ಬದುಕಿನಲ್ಲಿ ಅಜ್ಞಾನ, ದಾರಿದ್ರ್ಯ, ಬಡತನ ದೂರವಾಗಲು ಗುರು ಅತ್ಯವಶ್ಯಕ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರಗತಿವಾಹಿನಿ ಸುದ್ದಿ, ಖಾನಾಪುರ; ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಉನ್ನತ…
Read More » -
Sports
*ವಿಶ್ವ ಗೆದ್ದ ಭಾರತ*
ರಘುನಾಥ ಡಿಪಿ ಅಹ್ಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಭರ್ಜರಿ ನಿರ್ವಹಣೆ ತೋರಿದ ಭಾರತ ತಂಡ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ 96…
Read More »