Kannada NewsLatest

ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ನಿಂದ  ವ್ಯಾಪಾರ ಮತ್ತು ಕೈಗಾರಿಕೆಗಳಿಗಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭ 2ನೇ  ಉದ್ಯಮಬಾಗ್ ನ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಅತಿಥಿಯಾಗಿ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆನಂದ ದೇಶಪಾಂಡೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ  ದಿಲೀಪ್ ದಾಮ್ಲೆ ಮೆಮೋರಿಯಲ್ ಟ್ರಸ್ಟ್ ಪ್ರಶಸ್ತಿ ಯನ್ನು ಸ್ನೇಹಮ್ ಇಂಟರ್‌ನ್ಯಾಶನಲ್ ನ ಸುನೀಷ್ ಮೆತ್ರಾಣಿ ಅವರಿಗೆ ನೀಡಲಾಯಿತು.  ಬಸಪ್ಪ ಬಾಳಪ್ಪ ಕಗ್ಗಣಗಿ ಸ್ಮರಣಾರ್ಥ ನಿಧಿ ಪ್ರಶಸ್ತಿಯನ್ನು  ದೀಪಕ ಗುರುನಾಥ ಗೋಜಗೇಕರ ಅವರಿಗೆ ನೀಡಲಾಯಿತು. ಪ್ಯಾಟ್ಸನ್ ಆಟೋಮೊಬೈಲ್ಸ್ ಪ್ರೈ. ಲಿ.ನ ರಾಹುಲ್ ಪಾಟೀಲ್ ಅವರಿಗೆ  ಮಾಣಿಕ್ ಬಾಗ್ ಅಟೋಮೊಬೈಲ್ ಲಿಮಿಟೆಡ್ ನ ಪ್ರಶಸ್ತಿ,   ಹೈಟೆಕ್ ಮೋಟಾರ್ಸ್ ಎಂಡ್  ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನ ವಿನಯಕುಮಾರ ಬಾಳಿಕಾಯಿ ಅವರಿಗೆ  ಮಧುಕರ್ ವಿಠಲ್ ಹೆರ್ವಾಡ್ಕರ್ ಸ್ಮಾರಕ ಪ್ರಶಸ್ತಿ ನೀಡಲಾಯಿತು. 

ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ ಚೊಣ್ಣದ್ ಅವರ ಭಾವಚಿತ್ರವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ  ಅನಾವರಣಗೊಳಿಸಿದರು.  ಬಿಸಿಸಿಐ ಅಧ್ಯಕ್ಷ ರೋಹನ್ ಜುವಾಳಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ನಾಗರಮುನೋಳಿ  

Home add -Advt

ಕೊಳಗೇರಿ ನಿಗಮದಿಂದ ಶೀಘ್ರದಲ್ಲೇ ಮನೆಗಳ ನಿರ್ಮಾಣ : ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button