Latest

ರಾಜ್ಯದ ಜನತೆಗೆ ಗುಡ್ ನ್ಯೂಸ್; ರೆವೆನ್ಯೂ ಮನೆ ಗೈಡೆನ್ಸ್ ವ್ಯಾಲ್ಯೂ ಕಡಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದ ಜನಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಸ್ತಿ ಖರೀದಿ ವಹಿವಾಟಿಗೆ ಸಂಬಂಧಿಸಿದಂತೆ ರೆವೆನ್ಯೂ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಕಡಿತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರೆವೆನ್ಯೂ ಮನೆ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯೂ ಶೇ.10ರಷ್ಟು ಡಿಸ್ಕೌಂಟ್ ನೀಡಲಾಗುವುದು. ಜಮೀನು, ಮನೆ, ಸೈಟ್ ಹೀಗೆ ಯಾವುದನ್ನೇ ಖರೀದಿ ಮಾಡಿದರೂ 10 ಪರ್ಸೆಂಟ್ ಡಿಸ್ಕೌಂಟ್ ಮಾಡಲಾಗುವುದು. ಈ ನಿಯಮ ಇಂದಿನಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಿದರು.

Home add -Advt

ಈ ಅವಕಾಶ ಮೂರು ತಿಂಗಳವರೆಗೆ ಇರಲಿದ್ದು, ಕೋವಿಡ್ ಸಂಕಷ್ಟದಿಂದ ಜನರು ಸಮಸ್ಯೆ ಎದುರಿಸುತ್ತಿರುವುದರಿಂದ ಜನರಿಗೆ ಹೊಸವರ್ಷದ ಸಂದರ್ಭದಲ್ಲಿ ಈ ಕೊಡುಗೆ ನೀಡಲಾಗಿದೆ ಎಂದರು.
ಗ್ರಾಹಕರಿಗೆ ಗುಡ್ ನ್ಯೂಸ್; ಸಿಲಿಂಡರ್ ದರ ದಿಢೀರ್ ಇಳಿಕೆ

Related Articles

Back to top button