Karnataka NewsLatest

ನಾನು ಮಹಿಳೆಯನ್ನು ಹೊಡೆದೇ ಇಲ್ಲ ಎಂದ ಸಚಿವ ವಿ.ಸೋಮಣ್ಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ.ವಿ.ಸೋಮಣ್ಣ, ನಾನು ಮಹಿಳೆಗೆ ಹೊಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಚಾಮರಾಜಪೇಟೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ ನಡೆದ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ಅಂತಹ ಯಾವ ಘಟನೆ ನಿನ್ನೆ ನಡೆದಿಲ್ಲ. ನಾನು ಮಹಿಳೆಗೆ ಹೊಡೆದಿಲ್ಲ, ಆಕೆಯನ್ನು ಪಕ್ಕಕ್ಕೆ ಸರಿಸಿದೆ ಅಷ್ಟೇ ಎಂದಿದ್ದಾರೆ.

Home add -Advt

ಮಹಿಳೆ ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಸಾರಿ ಬರ್ತೀಯ? ನಿನ್ನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಹೇಳಿದೇನೆ ಎಂದು ಮಹಿಳೆಯನ್ನು ಪಕ್ಕಕ್ಕೆ ಸರಿಸಿದೆ ಅಷ್ಟೇ. ನನ್ನಿಂದ ಯಾವುದೇ ಅಪಚಾರವೂ ನಡೆದಿಲ್ಲ. ಆದರೂ ಯಾರಿಗಾದರೂ ನೋವಾದರೆ ಕ್ಷಮೆಯಾಚಿಸುತ್ತೇನೆ. ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವ, ಮರುಕವಿದೆ ಎಂದು ಹೇಳಿದ್ದಾರೆ.
ಅಂಗವಿಕಲನ ಮೇಲೆ ಹರಿದ KSRTC ಬಸ್; ವ್ಯಕ್ತಿ ಸ್ಥಳದಲ್ಲೇ ದುರ್ಮರಣ

https://pragati.taskdun.com/latest/ksrtc-busaccidenthandicap-man-death/

Related Articles

Back to top button